ದಾವಣಗೆರೆ:  ರಾಜ್ಯದ ಐದು ಕ್ಷೇತ್ರಗಳಲ್ಲಿ  ಚುನಾವಣೆ ನಡೆಯುತ್ತಿದ್ದು,   5  ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವುದು  ಖಚಿತ ಎಂದು  ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  

ಪ್ರಚಾರಕ್ಕೆ ನಾನು ಸಹ ಅನೇಕ ಕಡೆ ತೆರಳಿದ್ದು, ಕಾಂಗ್ರೆಸ್ ಪಕ್ಷಕ್ಕೆ ಜನರ ಬೆಂಬಲವಿದೆ.  ಬಿಜೆಪಿಯವರು ಗೆಲ್ಲುತ್ತೇವೆ ಎಂಬುದು ಸುಳ್ಳು. *ಎಲ್ಲ ಕಡೆ ನಾವೇ ಗೆಲ್ಲುತ್ತೇವೆ. ಬಳ್ಳಾರಿಯಲ್ಲಿಯೂ ಕೂಡ ಕಾಂಗ್ರೆಸ್ ಗೆಲ್ಲಲಿದೆ ಎಂದು ಶಾಮನೂರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಡಿಸಿಎಂ ಆಫರ್ :   ಇನ್ನು ಇದೇ ವೇಳೆ ಬಿಜೆಪಿಯವರು ನೀಡಿದ್ದ ಡಿಸಿಎಂ ಆಮೀಷಕ್ಕೆ ಶಾಮನೂರು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. 

ಇನ್ನು ಇದೇ ವೇಳೆ ಎಂ.ಪಿ ರವೀಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು,  ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು. ತಾಯಿ ಎದುರು ಮಗನ ಸಾವು ನೋವಿನ ವಿಚಾರ ಎಂದು ಹೇಳಿದ್ದಾರೆ.