ರಾಜ್ಯ ರಾಜಕೀಯದಲ್ಲಿ ಪ್ರಹಸನ ಮುಂದುವರಿದಿದೆ. ರೆಬೆಲ್ ಶಾಸಕರ ಹೋಟೆಲ್ ವಾಸ ಮುಂದುವರಿದಿದೆ. ಇತ್ತ ಕೈ ಶಾಸಕರೋರ್ವರು ರೆಸಾರ್ಟ್ ರಾಜಕೀಯ ಬಿಟ್ಟು ಹೊರ ಬಂದಿದ್ದಾರೆ. 

ಬೆಂಗಳೂರು [ಜು.20] : ರೆಸಾರ್ಟ್ ರಾಜಕೀಯ ಬಿಟ್ಟು ಶಹಾಪುರ ಕಾಂಗ್ರೆಸ್ ಶಾಸಕ ಶರಣಬಸಪ್ಪ ಗೌಡ ಹೊರ ಬಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಆಗಮಿಸಿದ್ದು, ಖಾಸಗಿ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದಾರೆ. 

ಶನಿವಾರ ರಾತ್ರಿ ಕಲಬುರಗಿಯಿಂದ ಮತ್ತೆ ಬೆಂಗಳೂರಿಗೆ ತೆರಳಲಿರುವ ಶಾಸಕ ದರ್ಶನಾಪುರ, ವಿಶ್ವಾಸಮತ ಯಾಚನೆ ಹಿನ್ನೆಲೆ ಆಗಮಿಸುತ್ತಿದ್ದಾರೆ.

ಆದರೆ ಅತ್ತ ರೆಬೆಲ್ ಆದ ಶಾಸಕರ ಹೋಟೆಲ್ ವಾಸ ಮುಂದುವರಿದಿದೆ. ಅಸಮಾಧಾನಗೊಂಡು ಮುಂಬೈ ಸೇರಿದವರು ಮೈತ್ರಿ ಪಾಳಯ ಧಿಕ್ಕರಿಸಿದ್ದಾರೆ. ಆದರೆ ಇತ್ತ ಅವರ ಮನವೊಲಿಕೆ ಯತ್ನ ಮಾತ್ರ ನಿರಂತರವಾಗಿ ನಡೆಯುತ್ತಿದೆ.