ಪನಮಾ ಹಗರಣದ ಪರಿಣಾಮ ನಿರ್ಗಮಿತ ಪ್ರಧಾನಿ ನವಾಜ್ ಷರೀಫ್ ಅವರನ್ನು ಸುಪ್ರೀಂ ಕೋರ್ಟ್ ಅನರ್ಹ ಎಂದು ಘೋಷಿಸಿದ ಪರಿಣಾಮ ನಿನ್ನೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ನವದೆಹಲಿ(ಜು.29): ಆಡಳಿತ ಪಕ್ಷ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ಪೆಟ್ರೋಲಿಯಂ ಹಾಗೂ ಸ್ವಾಭಾವಿಕ ಸಂಪನ್ಮೂಲ ಸಚಿವ ಶಾಹಿದ್ ಖಾಕನ್ ಅಬ್ಬಾಸಿ ಅವರನ್ನು ಪಾಕಿಸ್ತಾನದ ಮಧ್ಯಂತರ ಪ್ರಧಾನಿಯನ್ನಾಗಿ ನೇಮಿಸಿದೆ.
ಪನಮಾ ಹಗರಣದ ಪರಿಣಾಮ ನಿರ್ಗಮಿತ ಪ್ರಧಾನಿ ನವಾಜ್ ಷರೀಫ್ ಅವರನ್ನು ಸುಪ್ರೀಂ ಕೋರ್ಟ್ ಅನರ್ಹ ಎಂದು ಘೋಷಿಸಿದ ಪರಿಣಾಮ ನಿನ್ನೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಮೊದಲು ಪಿಎಂ'ಎಲ್-ಎನ್ ನಾಯಕರು ಹಾಗೂ ಷರೀಫ್ ಕುಟುಂಬದ ಸದಸ್ಯರು ಮಾಜಿ ರಕ್ಷಣಾ ಸಚಿವ ಖ್ವಾಜಾ ಮೊಹಮದ್ ಆಸೀಫ್ ಅವರಿಗೆ ಬೆಂಬಲ ಸೂಚಿಸಿದ್ದರು. ಆದರೆ ಅನಿರಿಕ್ಷಿತ ಬೆಳವಣಿಗೆಯ ಹಿನ್ನಲೆಯಲ್ಲಿ ಶಾಹಿದ್ ಖಾಕನ್ ಅಬ್ಬಾಸಿ ಆಯ್ಕೆಯಾಗಿದ್ದಾರೆ.
