ಇಲ್ಲಿನ ಉರ್ದು ವಿಶ್ವವಿದ್ಯಾಲಯದ 6 ನೇ ಘಟಿಕೋತ್ಸವದಲ್ಲಿ ಸೂಪರ್ ಸ್ಟಾರ್ ಶಾರೂಕ್ ಖಾನ್ ಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.

ಹೈದರಾಬಾದ್ (ಡಿ. 26): ಇಲ್ಲಿನ ಉರ್ದು ವಿಶ್ವವಿದ್ಯಾಲಯದ 6 ನೇ ಘಟಿಕೋತ್ಸವದಲ್ಲಿ ಸೂಪರ್ ಸ್ಟಾರ್ ಶಾರೂಕ್ ಖಾನ್ ಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. 

ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉರ್ದು ಭಾಷೆಗೆ ಮತ್ತು ಸಾಹಿತ್ಯಕ್ಕೆ ಶಾರೂಕ್ ನೀಡಿದ ಅಸಾಮಾನ್ಯ ಕೊಡುಗೆಗಾಗಿ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ತೆಲಂಗಾಣ ರಾಜ್ಯಪಾಲ ಇಎಸ್'ಎಲ್ ನರಸಿಂಹನ್, ಉಪಮುಖ್ಯಮಂತ್ರಿ ಮಹಮ್ಮದ್ ಅಲಿ, ಮತ್ತು ವಿಶ್ವವಿದ್ಯಾಲಯದ ಉಪಕುಲಪತಿ ಜಾಫರ್ ಯೂನಸ್ ಸಾರೇಶ್ ವಾಲಾ ಉಪಸ್ಥಿತರಿದ್ದರು.