ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಕಳೆದ 25 ದಿನಗಳಲ್ಲಿ 101 ಕೋಟಿ ರು. ಆದಾಯ ಹರಿದುಬಂದಿದೆ.

ತಿರುವನಂತಪುರ: ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಕಳೆದ 25 ದಿನಗಳಲ್ಲಿ 101 ಕೋಟಿ ರು. ಆದಾಯ ಹರಿದುಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಯ್ಯಪ್ಪ ದೇಗುಲದಲ್ಲಿ 2 ತಿಂಗಳ ಅವಧಿಯಲ್ಲಿ ಉತ್ಸವ ಕಾರ್ಯಕ್ರಮಗಳು ಪ್ರತಿ ವರ್ಷ ನಡೆಯುತ್ತವೆ.

ಈ ವರ್ಷ ನ.16ರಿಂದ ಉತ್ಸವ ಆರಂಭವಾಗಿದೆ. ಈ ಅವಧಿಯಲ್ಲಿ ಪಾಯಸಂ ಮಾರಾಟದ ಮೂಲಕ 44 ಕೋಟಿ ರು. ಮತ್ತು ಹುಂಡಿಗೆ ಭಕ್ತರು ಹಾಕಿದ ಕಾಣಿಕೆಯಿಂದ 35 ಕೋಟಿ ರು. ಮತ್ತು ಇತರೆ ಮೂಲಗಳಿಂದ 22 ಕೋಟಿ ರು. ಆದಾಯ ಸಂಗ್ರಹವಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 86 ಕೋಟಿ ರು. ಆದಾಯ ಬಂದಿತ್ತು.