ಬಹುಭಾಷಾ ನಟ ಕಮಲ್​ ಹಾಸನ್​ ಹಿಂದೂ ಭಯೋತ್ಪಾದನೆ ಕುರಿತ ವಿವಾದಾತ್ಮಕ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲೇ, ಬೆಂಗಳೂರಿನ ಮೈಸೂರು ಬ್ಯಾಂಕ್​ ವೃತ್ತದಲ್ಲಿ ಹೇಳಿಕೆ ಬೆಂಬಲಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಬೆಂಗಳೂರು (ನ.05): ಬಹುಭಾಷಾ ನಟ ಕಮಲ್​ ಹಾಸನ್​ ಹಿಂದೂ ಭಯೋತ್ಪಾದನೆ ಕುರಿತ ವಿವಾದಾತ್ಮಕ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲೇ, ಬೆಂಗಳೂರಿನ ಮೈಸೂರು ಬ್ಯಾಂಕ್​ ವೃತ್ತದಲ್ಲಿ ಹೇಳಿಕೆ ಬೆಂಬಲಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಕಮಲಹಾಸನ್ ಹೇಳಿಕೆ ಬೆಂಬಲಿಸಿ ಡಿವೈಎಫ್​ಐ, ಎಸ್​ಎಫ್​ಐ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಕಮಲಹಾಸನ್ ಪರ ನಾವಿದ್ದೇವೆ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿಂದೂ ಸಂಘಟನೆಗಳಲ್ಲಿ ಭಯೋತ್ಪಾದನೆ ಇದೆ ಎಂದು ಕಮಲ್ ಹೇಳಿದ್ದರಿಂದ ಕಮಲ್​ ಹಾಸನ್ ರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ಮುಖ್ಯಸ್ಥ ಪಂಡಿತ್​ ಅಶೋಕ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದ್ದರಿಂದ ಡಿವೈಎಫ್​ಐ, ಎಸ್​ಐಫ್​ಐ ಪ್ರತಿಭಟನೆ ನಡೆಸುತ್ತಿವೆ.