ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಲೆಯಾಳಂ ನಟಿಯೊಬ್ಬಳಿಗೆ ಕಿರಾತಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ.

ಬೆಂಗಳೂರು (ಫೆ.02): ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಲೆಯಾಳಂ ನಟಿಯೊಬ್ಬಳಿಗೆ ಕಿರಾತಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಣ್ಣೂರಿನಿಂದ ತಿರುವನಂತಪುರಂಗೆ ತೆರಳುತ್ತಿದ್ದ ನಟಿಯೊಬ್ಬಳಿಗೆ ತಮಿಳುನಾಡಿನ ಌಂಡೋ ಬೋಸ್ ಎಂಬಾತ ಕಿರುಕುಳ ಕೊಟ್ಟಿದ್ದಾನೆ. ರೈಲಿನಲ್ಲಿ ಮಲಗಿದ್ದ ನಟಿಯ ತುಟಿಯನ್ನು ಮುಟ್ಟಿ ಅಸಭ್ಯ ವರ್ತಿಸಿದ್ದಾನೆ. ಈ ವೇಳೆ ಎಚ್ಚೆತ್ತ ನಟಿ ಆರೋಪಿಯನ್ನು ಥಳಿಸಿ ತನ್ನ ರಕ್ಷಣೆ ಮಾಡಿಕೊಂಡಿದ್ದಾಳೆ. ಇಷ್ಟಾದರೂ ಸಹ ಪ್ರಯಾಣಿಕರು ಮಾತ್ರ ನಟಿಯ ನೆರವಿಗೆ ಬಾರಲಿಲ್ಲ. ಹೀಗಾಗಿ ನಟಿ ಪೊಲೀಸರ ಮೊರೆ ಹೋಗಿದ್ದಾಳೆ.

ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಸನುಷಾ, ಕನ್ನಡದಲ್ಲೂ ನಟಿಸಿದ್ದಾರೆ.