ರಂಗಿ ತರಂಗ’ ಖ್ಯಾತಿಯ ನಟಿ ಅವಂತಿಕಾ ಶೆಟ್ಟಿಗೆ ಲೈಗಿಂಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ‘ರಾಜು ಕನ್ನಡ ಮೀಡಿಯಂ’ ನಿರ್ಮಾಪಕ ಸುರೇಶ್ ಲೈಗಿಂಕ ಕಿರುಕುಳ ನೀಡಿದ್ದಾರೆ ಎಂದು ನಟಿ ಅವಂತಿಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಬೆಂಗಳೂರು(ಜೂ.04): ‘ರಂಗಿ ತರಂಗ’ ಖ್ಯಾತಿಯ ನಟಿ ಅವಂತಿಕಾ ಶೆಟ್ಟಿಗೆ ಲೈಗಿಂಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ‘ರಾಜು ಕನ್ನಡ ಮೀಡಿಯಂ’ ನಿರ್ಮಾಪಕ ಸುರೇಶ್ ಲೈಗಿಂಕ ಕಿರುಕುಳ ನೀಡಿದ್ದಾರೆ ಎಂದು ನಟಿ ಅವಂತಿಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಮೂಲತಃ ಕನ್ನಡದವರಾದರೂ ಮುಂಬೈನಲ್ಲಿ ನೆಲೆಸಿರುವ ನಟಿ ಅವಂತಿಕಾ ಶೆಟ್ಟಿ ‘ರಂಗಿ ತರಂಗ’ ಚಿತ್ರದ ಮೂಲಕ ಸ್ಯಾಂಡಲ್'ವುಡ್'ಗೆ ಎಂಟ್ರಿ ಪಡೆದಿದ್ದರು. ಸದ್ಯ ನರೇಶ್ ನಿರ್ದೇಶನದ ‘ರಾಜು ಕನ್ನಡ ಮೀಡಿಯಂ’ ಚಿತ್ರಕ್ಕೆ ನಾಯಕಿ ಆಗಿ ನಟಿಸುತ್ತಿದ್ದರು. ಆದರೆ ಚಿತ್ರಿಕರಣ ಮುಗಿಯುವ ಮುನ್ನವೆ ‘ರಾಜು ಕನ್ನಡ ಮೀಡಿಯಂ’ ಚಿತ್ರದಿಂದ ಹೊರಬಿದ್ದಿದ್ದಾರೆ.
ಚಿತ್ರೀಕರಣದ ಅರ್ಧದಲ್ಲಿಯೇ ನಟಿ ಅವಂತಿಕಾ ಶೆಟ್ಟಿ ಚಿತ್ರದಿಂದ ಹೊರಬಿದ್ದಿದ್ದು . ಚಿತ್ರ ತಂಡದಿಂದ ಲೈಗಿಂಕ ಕಿರುಕುಳವೇ ಇದಕ್ಕೆ ಕಾರಣ ಎನ್ನುವ ಆರೋಪವನ್ನು ಅವಂತಿಕಾ ಮಾಡಿದ್ದಾರೆ, ಆದರೆ ಚಿತ್ರೀಕರಣಕ್ಕೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ. ಟೈಮ್'ಗೆ ಸರಿಯಾಗಿ ಸೆಟ್'ಗೆ ಬರುತ್ತಿರಲಿಲ್ಲ ಅಂತ ಚಿತ್ರ ತಂಡ ಹೇಳುತ್ತಿದೆ.
