ಆಕಾಶ್​​ ಮೆಡಿಕಲ್ ಇನ್ಸ್ಟಿಟ್ಯೂಟ್ ಮಾಲಿಕನಿಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ, ಪ್ರಾಣ ಬೆದರಿಕೆ

First Published 17, Mar 2018, 9:50 AM IST
Sexual Harassment By Akash Medical Institute Owner
Highlights

ಆಕಾಶ್​​ ಮೆಡಿಕಲ್ ಇನ್ಸ್ಟಿಟ್ಯೂಟ್ ಮಾಲಿಕ ಮುನಿರಾಜ್’ನಿಂದ ಮಹಿಳೆಗೆ ಲೈಂಗಿಕ ದೌರ್ಜನ್ಯ  ಹಾಗೂ ಪ್ರಾಣ ಬೆದರಿಕೆ ಬಂದಿದೆ.

ಬೆಂಗಳೂರು (ಮಾ. 17):  ಆಕಾಶ್​​ ಮೆಡಿಕಲ್ ಇನ್ಸ್ಟಿಟ್ಯೂಟ್ ಮಾಲಿಕ ಮುನಿರಾಜ್’ನಿಂದ ಮಹಿಳೆಗೆ ಲೈಂಗಿಕ ದೌರ್ಜನ್ಯ  ಹಾಗೂ ಪ್ರಾಣ ಬೆದರಿಕೆ ಬಂದಿದೆ.  
ಆಕಾಶ್​​​ ಇನ್ಸ್ಟಿಟ್ಯೂಟ್ ಮಾಲಿಕ ಮುನಿರಾಜು ಮತ್ತು ಪುಷ್ಪ ಮುನಿರಾಜ್ ಎಂಬುವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ. 
ಕಳೆದ ನಾಲ್ಕು ವರ್ಷಗಳಿಂದ ಆಕಾಶ್ ಇನ್ಸ್ಟಿಟ್ಯೂಟ್’ನಲ್ಲಿ  ಮಹಿಳೆ ಕೆಲಸ ಮಾಡುತಿದ್ದರು.  ಎಂಸಿಐ ಇನ್ಸ್ ಸ್ಪೆಕ್ಷನ್ ವೇಳೆ ನಕಲಿ ರೋಗಿಗಳನ್ನು ಆಸ್ಪತ್ರೆಗೆ ಕರೆಸಲಾಗುತಿತ್ತು.  ಈ ಕೆಲಸವನ್ನು ದೂರುದಾರೆ ಸಂತ್ರಸ್ಥೆ  ಆಕಾಶ್ ಇನ್ಸ್ಟಿಟ್ಯೂಟ್ ಮಾಲಿಕರ ಸೂಚನೆಯಂತೆ ಮಾಡುತಿದ್ದರು.  ಸಂತ್ರಸ್ತ ಮಹಿಳೆ ಮಾಡುತಿದ್ದ ಕೆಲಸ ಎಂಸಿಐ ರೂಲ್ಸ್’ಗೆ ವಿರುದ್ದ ಎಂದು ತಿಳಿದು ಬಂದಿತ್ತು.  ಈ ವಿಚಾರವಾಗಿ ಸಂತ್ರಸ್ಥೆ ನಕಲಿ ರೋಗಿಗಳನ್ನು ಎಂಸಿಐ  ಇನ್ಸ್ ಸ್ಪೆಕ್ಷನ್’ಗೆ ಕರೆತರುವುದನ್ನು ನಿಲ್ಲಿಸಿದ್ದರು. ಇದರಿಂದ ಕೋಪಗೊಂಡ ಮುನಿರಾಜು  ಮಹಿಳೆಗೆ  ಲೈಂಗಿಕ ದೌರ್ಜನ್ಯ ಹಾಗೂ ಜೀವ ಬೆದರಿಕೆ ಹಾಕಿದ್ದಾರೆ.  ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

loader