ಮಠದಲ್ಲಿ ಇರುವ ಗೊಂದಲ ನಿವಾರಣೆಗೆ ಎರಡು ಬಣಗಳಿಂದ 9 ಮಂದಿ ಸಮಿತಿ ರಚಿಸಲಾಗಿದ್ದು, ಸಮಿತಿಗೆ 15 ದಿನಗಳ ಕಾಲ ಗಡುವು ನೀಡಲಾಗಿದೆ.
ಬೆಂಗಳೂರು(ಅ.28): ಮಠದಲ್ಲಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹುಣಸಮಾರನಹಳ್ಳಿ ಸಂಸ್ಥಾನ ಮಠದ ಪೀಠಾಧ್ಯಕ್ಷ ದಯಾನಂದ ಅಲಿಯಾಸ್ ಪಟ್ಟದ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿಯನ್ನು ಶ್ರೀಶೈಲ ಜಗದ್ಗುರು ಉಚ್ಚಾಟಿಸಿದ್ದಾರೆ.
ಮಠ ಖಾಲಿ ಮಾಡಲು ದಯಾನಂದ, ಕುಟುಂಬಸ್ಥರು ಸಹಿ ಹಾಕಿದ್ದಾರೆ. ಮಠ ತೊರೆಯಲು ದಯಾನಂದ ಹಾಗೂ ಆತನ ಕುಟುಂಬಕ್ಕೆ 15 ದಿನ ಕಾಲಾವಕಾಶ ನೀಡಲಾಗಿದ್ದು, ಅದಕ್ಕೆ ಆತ ಒಪ್ಪಿಗೆ ನೀಡಿದ್ದಾನೆ. ಮಠದಲ್ಲಿ ಇರುವ ಗೊಂದಲ ನಿವಾರಣೆಗೆ ಎರಡು ಬಣಗಳಿಂದ 9 ಮಂದಿ ಸಮಿತಿ ರಚಿಸಲಾಗಿದ್ದು, ಸಮಿತಿಗೆ 15 ದಿನಗಳ ಕಾಲ ಗಡುವು ನೀಡಲಾಗಿದೆ.
ಪ್ರಕರಣದಲ್ಲಿ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದ್ದು, ಆ ವರದಿ ಆಧಾರದ ಮೇಲೆ ಮುಂದಿನ ಪೀಠಾಧಿಪತಿ ಆಯ್ಕೆ ಮಾಡಲಾಗುತ್ತದೆ. ಈ ಮಠದಲ್ಲಿನ ಗೊಂದಲಗಳಿಗೆ. ನ.15ಕ್ಕೆ ಪರಿಹಾರ ಸಿಗಲಿದೆ'.
ಸುವರ್ಣ ನ್ಯೂಸ್'ನಿಂದ ಬಯಲು
500 ವರ್ಷಗಳ ಇತಿಹಾಸವಿರುವ ಬೆಂಗಳೂರಿನ ಹುಣಸಮಾರನಹಳ್ಳಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಪರ್ವತರಾಜ ಶಿವಾಚಾರ್ಯ ಸ್ವಾಮಿ ಮಗ ದಯಾನಂದ ಅಲಿಯಾಸ್ ಪಟ್ಟದ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿ ಯುವತಿಯೊಬ್ಬಳ ಜೊತೆ ಮಠದಲ್ಲೇ ಕಾಮದಾಟ ನಡೆಸಿದ್ದ.

