ಬ್ರಿಟನ್ ಸಂಸತ್ ಭವನದ ಹೊರಗೆ ಬಂದೂಕುಧಾರಿ ಉಗ್ರರಿಂದ ಗುಂಡಿನ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು 12 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಂಸತ್ ಭವನದ ಸಮೀಪವಿರುವ ವೆಸ್ಟ್ ಮಿನ್ಸ್ ಸ್ಟರ್ ಸಮೀಪ  ಈ ಘಟನೆ ನಡೆದಿದೆ ಎನ್ನಲಾಗಿದೆ. 

ನವದೆಹಲಿ (ಮಾ.22): ಬ್ರಿಟನ್ ಸಂಸತ್ ಭವನದ ಹೊರಗೆ ಬಂದೂಕುಧಾರಿ ಉಗ್ರರಿಂದ ಗುಂಡಿನ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು 12 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಂಸತ್ ಭವನದ ಸಮೀಪವಿರುವ ವೆಸ್ಟ್ ಮಿನ್ಸ್ ಸ್ಟರ್ ಸಮೀಪ ಈ ಘಟನೆ ನಡೆದಿದೆ ಎನ್ನಲಾಗಿದೆ. 

ಸಂಸತ್ ಅಧಿವೇಶನದ ವೇಳೆ ಈ ದಾಳಿ ನಡೆದಿದೆ. ಪ್ರಧಾನ ಮಂತ್ರಿ ಥೆರೆಸಾ ಮೇ ಸುರಕ್ಷಿತವಾಗಿದ್ದಾರೆ. ಅಧಿವೇಶನವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಪೊಲೀಸ್ ಸಿಬ್ಬಂದಿಗೆ ದುಷ್ಕರ್ಮಿಯಿಬ್ಬ ಚಾಕುವಿನಿಂದ ಇರಿದಿದ್ದಾನೆ. ದಾಳಿಕೋರನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ ಎನ್ನಲಾಗಿದೆ. ಇಬ್ಬರು ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಸಂಸತ್ ಭವನದ ಒಳಗೆ 200 ಸಂಸದರು ಇದ್ದರು.

ಇದೀಗ ಪಾರ್ಲಿಮೆಂಟ್ ಸುತ್ತಮುತ್ತ ಹೈ ಅಲರ್ಟ್ ವಿಧಿಸಲಾಗಿದೆ. ಇದು ಉಗ್ರರ ದಾಳಿ ಎಂದು ಬ್ರಿಟನ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.