ಖಾಸಗಿ ಬಸ್ ಸೇತುವೆಯಿಂದ ನದಿಗೆ ಬಿದ್ದು, ಕನಿಷ್ಠ 9 ಮಂದಿ ಮೃತಪಟ್ಟು, 25 ಜನರು ಗಾಯಗೊಂಡಿದ್ದಾರೆ.
ಶಿಮ್ಲಾ, [ನ.25]: ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್ ಸೇತುವೆಯಿಂದ ನದಿಗೆ ಬಿದ್ದು, ಕನಿಷ್ಠ 9 ಮಂದಿ ಮೃತಪಟ್ಟು, 25 ಜನರು ಗಾಯಗೊಂಡ ಘಟನೆ ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯಲ್ಲಿ ಇಂದು [ಭಾನುವಾರ] ಸಂಜೆ ನಡೆದಿದೆ.
ಈ ಘಟನೆಯು ರೆಣುಕಾ-ದದಹು-ನಹಾನು ರಸ್ತೆಯ ಖಾದ್ರಿ ಹಳ್ಳಿಯ ಸಮೀಪ ಸಂಭವಿಸಿದೆ. ಬಸ್ಸು ನಹಾನ್ ನಿಂದ ರೇಣುಕಾ ಜೀಗೆ ತೆರಳುತ್ತಿತ್ತು. ಆ ವೇಳೆ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ಜಲಾಲ್ ಸೇತುವೆಯಿಂದ ಸುಮಾರು 40 ಅಡಿ ಆಳಕ್ಕೆ ಜಲಾಲ್ ನದಿಗೆ ಬಿದ್ದಿದೆ ಎಂದು ಹೆಚ್ಚುವರಿ ಎಸ್ ಪಿ ವೀರೆಂದರ್ ಸಿಂಗ್ ಠಾಕೂರ್ ಮಾಹಿತಿ ನೀಡಿದ್ದಾರೆ.
ಮೂವರು ಮಹಿಳೆಯರನ್ನು ಒಳಗೊಂಡಂತೆ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಐವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇನ್ನು ಕೆಲ ಗಾಯಾಳುಗಳನ್ನ ನಹಾನ್ ಹಾಗೂ ದದಹುನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಚಾಲಕನ ನಿರ್ಲಕ್ಷ್ಯತೆಯೇ ಈ ಅಪಘಾತ ಕಾರಣ ಎಂದು ಶಂಕಿಸಲಾಗಿದೆ.
