ಬೆಂಗಳೂರು : ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಇಂದು ನಡೆದ ಬಿಜೆಪಿ ಸಭೆಯಲ್ಲಿ ಪಕ್ಷದ ಮುಖಂಡರಿಗೆ ಹಲವು ರೀತಿಯಾದ ಸಂದೇಶಗಳನ್ನು ರವಾನಿಸಿದ್ದಾರೆ.   

ಕೆಲವು ಕಾಂಗ್ರೆಸ್- ಜೆಡಿಎಸ್ ನಾಯಕರು ಬಿಜೆಪಿ ಸೇರಲು ಇಚ್ಛಿಸಿದ್ದಾರೆ.  ಹೀಗೆ ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಬರುವವರನ್ನು ಸ್ವಾಗತ ಮಾಡಿ ಪಕ್ಷಕ್ಕೆ ಸೇರಿಸಬೇಕು. ಬೇರೆಯವರು ಬಂದರೆ ನಿಮ್ಮ ಸ್ಥಾನಕ್ಕೆ ಕಂಟಕ ಎಂದು ಭಾವಿಸಬೇಡಿ ಎಂದು ಅವರು ತಿಳಿಸಿದ್ದಾರೆ. 

ಇನ್ನು ಇದೇ ವೇಳೆ ಎಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದು, ಎಲ್ಲಾ ವಿಚಾರಗಳ ಬಗ್ಗೆ ನಿಮಗೆ ಮಾಹಿತಿ ಇದ್ದರೂ ಯಾರು ಪತ್ರಿಕಾಗೋಷ್ಠಿಗಳನ್ನ ಕರೆದು ಮಾತಾಡುತ್ತಿಲ್ಲ. ಯಾರು ಕೂಡ ಹೋರಾಟಗಳನ್ನ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. 

ಇನ್ನು ಇದೇ ವೇಳೆ ಬಜೆಟ್ ಮಂಡನೆ ಬಳಿಕ ‌ನಮ್ಮ ಹೋರಾಟ ಹೇಗಿರಬೇಕು ಎಂದು ಎಚ್ಚರಿಕೆಯಿಂದ ನಿರ್ಧಾರ ಮಾಡಬೇಕು. ಈ ಬಾರಿ ಕರ್ನಾಟಕದ  28 ಲೋಕಸಭಾ ಕ್ಷೇತ್ರಗಳಲ್ಲಿ 25ಕ್ಕೂ ಹೆಚ್ಚು ಗೆಲ್ಲಬೇಕು ಎಂದು ತಿಳಿಸಿದರು. 

ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಗೆಲುವು ಪಡೆಯಲು ಎಲ್ಲರೂ ಕೂಡ ಶ್ರಮ ವಹಿಸ ಬೇಕು, ಹೋರಾಟಕ್ಕೆ ಸನ್ನದ್ಧರಾಗಬೇಕು ಎಂದು ಯಡಿಯೂರಪ್ಪ ಪಧಾದಿಕಾರಿಗಳಿಗೆ ಕರೆ ನೀಡಿದ್ದಾರೆ.