ಶೇಖ್ ಅಝರುಲ್ ಇಸ್ಲಾಮ್ ಹಾಗೂ ಫರ್ಹಾನ್ ಶೇಖ್ ಎಂಬಿಬ್ಬರು ತಾವು ಐಸಿಸ್’ಗಾಗಿ ಹಣ ಸಂಗ್ರಹ ಹಾಗೂ ಜನರನ್ನು ನೇಮಿಸಿರುವುದಾಗಿಯೂ ತಪ್ಪೊಪ್ಪಿಕೊಂಡಿದ್ದರು.

ನವದೆಹಲಿ (ಏ.21): ಉಗ್ರ ಸಂಘಟನೆ ಐಸಿಸ್’ಗೆ ಧನ ಸಂಗ್ರಹ ಮಾಡಿರುವ ಇಬ್ಬರು ವ್ಯಕ್ತಿಗಳಿಗೆ ದೆಹಲಿ ನ್ಯಾಯಾಲಯವು 7 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ.

ಶೇಖ್ ಅಝರುಲ್ ಇಸ್ಲಾಮ್ ಹಾಗೂ ಫರ್ಹಾನ್ ಶೇಖ್ ಎಂಬಿಬ್ಬರು ತಾವು ಐಸಿಸ್’ಗಾಗಿ ಹಣ ಸಂಗ್ರಹ ಹಾಗೂ ಜನರನ್ನು ನೇಮಿಸಿರುವುದಾಗಿಯೂ ತಪ್ಪೊಪ್ಪಿಕೊಂಡಿದ್ದರು.

ಕಳೆದ ಮಾ.29ರಂದು ರಾಷ್ಟ್ರೀಯ ತನಿಖಾ ದಳ (ಎನ್’ಐಏ) ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ, ತಮ್ಮ ಕೃತ್ಯಗಳ ಬಗ್ಗೆ ಪಶ್ಚತ್ತಾಪವಿದೆಯೆಂದೂ, ಮುಂದಿನ ದಿನಗಳಲ್ಲಿ ಸಮಾಜಕ್ಕಾಗಿ ಒಳ್ಳೆಯ ಕೆಲಸಮಾಡುವುದಾಗಿಯೂ ಅವರು ಹೇಳಿಕೊಂಡಿದ್ದರು.

ಕಳೆದ ಜ, 29ರಂದು ಅವರಿಬ್ಬರನ್ನು ಬಂಧಿಸಲಾಗಿತ್ತು.