ಒಂದಲ್ಲ ಎರಡಲ್ಲ, 7 ಆನೆಗಳು ಒಂದೇ ಬಾರಿಗೆ ಮೃತಪಟ್ಟ ದುರಂತ ಘಟನೆಯೊಂದು ಶನಿವಾರ ಸಂಭವಿಸಿದೆ. ಒಡಿಶಾದ ದೆಂಕನಲ್ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. 

ಒಡಿಶಾ : ಶನಿವಾರ ಬೆಳ್ಳಂಬೆಳಗ್ಗೆ ಒಡಿಶಾದ ದೆಂಕನಲ್ ಜಿಲ್ಲೆಯ ಕಮಲಂಗಾ ಪ್ರದೇಶದಲ್ಲಿ 7 ಆನೆಗಳು ಸಾವಿಗೀಡಾಗಿವೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿದ್ಯುತ್ ಶಾಕ್ ತಗುಲಿ 7 ಆನೆಗಳು ಸಾವಿಗೀಡಾಗಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಈಗಾಗಲೇ ತನಿಖೆಗೆ ಆದೇಶಿಸಿದೆ. 

ಈ ಹಿಂದೆಯೂ ಕೂಡ ಅನೇಕ ಬಾರಿ ಇಂತಹ ಕಾರಣಗಳಿಂದಲೇ ಅನೇಕ ಪ್ರಾಣಿಗಳು ಸಾವನ್ನಪ್ಪಿದ್ದವು. 

ಇದರಿಂದ ಪ್ರಾಣಿ ರಕ್ಷಣಾ ಕಾರ್ಯಕರ್ತರು ಹಾಗೂ ಪರಿಸರ ವಾದಿಗಳು ತೀವ್ರ ಆಕ್ರೊಶ ವ್ಯಕ್ತಪಡಿಸಿದ್ದು, ಪ್ರಾಣಿಗಳ ಸ್ಥಳಗಳನ್ನು ಮನುಷ್ಯ ಆಕ್ರಮಿಸಿಕೊಳ್ಳುತ್ತಿರುವುದೇ ಇಂತಹ ದುರಂತಗಳಿಗೆ ಕಾರಣ ಎಂದಿದ್ದರು. ಇದೀಗ ಮತ್ತೊಮ್ಮೆ ಇಂತಹ ಭಾರೀ ದುರಂತ ನಡೆದಿದ್ದು, ಒಂದೇ ಬಾರಿ 7 ಆನೆಗಳು ಸಾವಿಗೀಡಾಗಿವೆ.