ಮುಂಬೈ [ಜು.28]: NCPಗೆ ಮತ್ತೊಂದು ಹಿನ್ನಡೆಯುಂಟಾಗಿದೆ. ಮಹಾರಾಷ್ಟ್ರ ಶಾಸಕರೋರ್ವರು ಇದೀಗ ತಮ್ಮ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. 

 ಹಿರಿಯ ಎನ್ ಸಿಪಿ  ನಾಯಕ ಮಧುಕರ್ ಪಿಚದ್ ಅವರ ಪುತ್ರ  ವೈಭವ್ ಪಿಚದ್ ಮಹಾರಾಷ್ಟ್ರ ಆಡಳಿತ ಪಕ್ಷವಾಗಿರುವ ಬಿಜೆಪಿಗೆ ಶೀಘ್ರ ಸೇರುವುದಾಗಿ ತಿಳಿಸಿದ್ದಾರೆ.

ಕಳೆದ ಎರಡು ದಿನಗಳ ಹಿಂದಷ್ಟೇ NCP ಮುಂಬೈ ಘಟಕದ ಅಧ್ಯಕ್ಷರಾಗಿದ್ದ ಸಚಿನ್ ಅಹಿರ್ ಶಿವ ಸೇನೆ ಸೇರಿದ್ದು, ಇದೀಗ ಮತ್ತೋರ್ವ ನಾಯಕ ಪಕ್ಷ ತೊರೆಯಲು ಸಜ್ಜಾಗಿದ್ದು, ಸಾಕಷ್ಟು ಹಿನ್ನಡೆಯಾದಂತಾಗಿದೆ. 

ಅತೃಪ್ತ ಶಾಸಕರು ಅನರ್ಹ: ಬದಲಾಯ್ತು ನಂಬರ್ ಗೇಮ್!

ಪಕ್ಷ ಸೇರ್ಪಡೆ ಬಗ್ಗೆ ಈಗಾಗಲೇ  ಬೆಂಬಲಿಗರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಬೆಂಬಲಿಗರಿಂದಲೂ ಇದಕ್ಕೆ ಒಪ್ಪಿಗೆ ದೊರಕಿದೆ ಎಂದು ವೈಭವ್ ಹೇಳಿದ್ದಾರೆ. 

ಅಲ್ಲದೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಕ್ಷೇತ್ರದ ಅಭಿವೃದ್ಧಿಗೆ ಸೂಕ್ತ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದು ವೈಭವ್ ತಿಳಿಸಿದರು.