ಡಾಲರ್ ಎದುರು ರುಪಾಯಿ ಮೌಲ್ಯ ಇಂದು ಚೇತರಿಕೆ ಕಾಣುವ ಮೂಲಕ ಭಾರತೀಯ ಮಾರುಕಟ್ಟೆಗೆ ಡಬಲ್ ಧಮಾಕ ಆಗಿದೆ. ಬುಧವಾರ ಪ್ರತೀ ಡಾಲರ್'ಗೆ ರೂಪಾಯಿ ಮೌಲ್ಯ 63.93ಕ್ಕೆ ಏರಿದೆ. ಇದು ಕಳೆದ 20 ತಿಂಗಳಲ್ಲಿ ಹೊಸ ದಾಖಲೆಯಾಗಿದೆ.

ನವದೆಹಲಿ(ಏ. 26): ಭಾರತದ ಷೇರುಪೇಟೆ ಇಂದು ಹೊಸ ಮೈಲಿಗಲ್ಲು ಮುಟ್ಟಿದೆ. ಬಿಎಸ್'ಇ ಸೆನ್ಸೆಕ್ಸ್ ತನ್ನ ಇತಿಹಾಸದಲ್ಲೇ ಅತ್ಯಧಿಕ ಮಟ್ಟಕ್ಕೇರಿದೆ. ಸೆನ್ಸೆಕ್ಸ್ ಸೂಚ್ಯಂಕ ಬುಧವಾರದ ದಿನಾಂತ್ಯಕ್ಕೆ 30,133.35 ಅಂಕಕ್ಕೆ ನಿಂತಿತು. ಸೂಚ್ಯಂಕವು ಇಂದು 30,167.09 ಮಟ್ಟ ಮುಟ್ಟಿದ್ದು ದಾಖಲೆಯಾಗಿದೆ. ಸೆನ್ಸೆಕ್ಸ್ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ 30 ಸಾವಿರ ಪಾಯಿಂಟ್ ಮಟ್ಟಕ್ಕೆ ದಿನಾಂತ್ಯವಾಗಿದ್ದು. ಇದೇ ವೇಳೆ, ಎನ್'ಎಸ್'ಇ ನಿಫ್ಟಿ ಸೂಚ್ಯಂಕ ಕೂಡ 9,367 ಪಾಯಿಂಟ್'ಗಳ ಮಟ್ಟಕ್ಕೇರಿ ಹೊಸ ದಾಖಲೆ ಸ್ಥಾಪಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು, ಡಾಲರ್ ಎದುರು ರುಪಾಯಿ ಮೌಲ್ಯ ಇಂದು ಚೇತರಿಕೆ ಕಾಣುವ ಮೂಲಕ ಭಾರತೀಯ ಮಾರುಕಟ್ಟೆಗೆ ಡಬಲ್ ಧಮಾಕ ಆಗಿದೆ. ಬುಧವಾರ ಪ್ರತೀ ಡಾಲರ್'ಗೆ ರೂಪಾಯಿ ಮೌಲ್ಯ 63.93ಕ್ಕೆ ಏರಿದೆ. ಇದು ಕಳೆದ 20 ತಿಂಗಳಲ್ಲಿ ಹೊಸ ದಾಖಲೆಯಾಗಿದೆ.