ಕೇವಲ ಒಂದು ತಿಂಗಳ ಅವಧಿಯಲ್ಲಿ ದೇಶದಲ್ಲಿ ಮೂವರ ಪತ್ರಕರ್ತರ ಹತ್ಯೆಯಾಗಿದೆ.

ಮೊಹಾಲಿ(ಸೆ.23): ಚಾಕುವಿನಿಂದ ಗಂಟಲು ಸೀಳಿ ಹಿರಿಯ ಪತ್ರಕರ್ತ ಹಾಗೂ ಆತನ ತಾಯಿಯನ್ನು ಹತ್ಯೆ ಮಾಡಿರುವ ಘಟನೆ ಪಂಜಾಬಿನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊಹಾಲಿಯ ಅಪಾರ್ಟ್'ಮೆಂಟ್'ನಲ್ಲಿ ಪತ್ರಕರ್ತ ಕೆಜೆ ಸಿಂಗ್(60) ಹಾಗೂ ಇವರ ತಾಯಿ ಗುರುಚರಣ್ ಕೌರ್(92) ಅವರನ್ನು ಕೊಲೆ ಮಾಡಲಾಗಿದೆ. ಕೆಜೆ ಸಿಂಗ್ ಅವರು ಚಂಢೀಘಡದಲ್ಲಿ ಇಂಡಿಯನ್ ಎಕ್ಸ್'ಪ್ರೆಸ್, ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವು ಆಂಗ್ಲ ದೈನಿಕಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಕೊಲೆಯಾಗಿರುವುದನ್ನು ಮೊಹಾಲಿಯ ಎಸ್'ಪಿ ಕುಲ್'ದೀಪ್ ಚಹಾಲ್ ದೃಢಪಡಿಸಿದ್ದು ತನಿಖೆಯನ್ನು ಆರಂಭಿಸಿದ್ದಾರೆ.

ಹತ್ಯೆಯ ನಂತರ ಸಿಂಗ್ ಅವರ ಫೋರ್ಡ್ ಐಕಾನ್ ಕಾರು ಕಾಣೆಯಾಗಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ದೇಶದಲ್ಲಿ ಮೂವರ ಪತ್ರಕರ್ತರ ಹತ್ಯೆಯಾಗಿದೆ. ಸೆ.4 ರಂದು ಕನ್ನಡ ವಾರಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. 2 ದಿನಗಳ ಹಿಂದೆ ತ್ರಿಪುರದಲ್ಲಿ ಪ್ರತಿಭಟನೆಯನ್ನು ಚಿತ್ರೀಕರಿಸುತ್ತಿದ್ದ ಸ್ಥಳೀಯ ಟೀವಿ ಚಾನಲ್ ವರದಿಗಾರ ಶಾಂತನು ಬೌಮಿಕ್ ಎಂ ಹತ್ಯೆ ಮಾಡಲಾಗಿತ್ತು.