ಕಾಂಗ್ರೆಸ್ ಲಂಚ ಡೈರಿಯಲ್ಲಿ ಹೆಸರು ಕೇಳಿ ಬಂದಿರುವ ಆರೋಪವನ್ನು ಕಾಂಗ್ರೆಸ್ ಮುಖಂಡ ಮೋತಿಲಾಲ್ ವೋಹ್ರಾ ನಿರಾಕರಿಸಿದ್ದಾರೆ.

ನವದೆಹಲಿ(ಫೆ.25): ಕಾಂಗ್ರೆಸ್ ಲಂಚ ಡೈರಿಯಲ್ಲಿ ಹೆಸರು ಕೇಳಿ ಬಂದಿರುವ ಆರೋಪವನ್ನು ಕಾಂಗ್ರೆಸ್ ಮುಖಂಡ ಮೋತಿಲಾಲ್ ವೋಹ್ರಾ ನಿರಾಕರಿಸಿದ್ದಾರೆ.

ನನಗೆ ಡೈರಿ ಬಗ್ಗೆ ಏನೂ ಗೊತ್ತಿಲ್ಲ. ಡೈರಿಯಲ್ಲಿರುವ ವಿಚಾರಗಳ ಕುರಿತು ನನಗೆ ಮಾಹಿತಿಯಿಲ್ಲ. ಅದು ಯಾರಿಗೆ ಸಂಬಂಧಿಸಿದ್ದು ಎನ್ನುವುದು ಗೊತ್ತಿಲ್ಲ. ಈ ಆರೋಪ ಸುಳ್ಳು ಎಂದು ಮೋಹ್ರಾ ಹೇಳಿದ್ದಾರೆ.

ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಕೆ.ಗೋವಿಂದರಾಜು ಮನೆ ಮೇಲೆ ಐಟಿ ದಾಳಿ ನಡೆದಾಗ ಡೈರಿ ಸಿಕ್ಕಿತ್ತು. ಇದರಲ್ಲಿ ಕಾಂಗ್ರೆಸ್ ಮುಖಂಡರು ಹೈ ಕಮಾಂಡ್ ಗೆ ಕಪ್ಪ ನೀಡಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿತ್ತು.