ಕೇಂದ್ರ ಸಚಿವ ಅನಂತ್'ಕುಮಾರ್ ಹೆಗಡೆಯನ್ನು ತಬ್ಬಿಬ್ಬು ಮಾಡಿದ ವೃದ್ಧೆ

Senior Citizen ask question AnanthKumar Hegde
Highlights

ಕೇಂದ್ರ ಸಚಿವ ಅನಂತ್'ಕುಮಾರ್ ಹೆಗಡೆಯನ್ನು ತಬ್ಬಿಬ್ಬು ಮಾಡಿದ ವೃದ್ಧೆ

ಅಂಕೋಲ(ಮಾ.03): ರಾಜ್ಯ ಸರ್ಕಾರವನ್ನು ಸದಾ ಪೇಚಿಗೆ ಸಿಲುಕಿಸುವ ಕೇಂದ್ರ ಸಚಿವ ಅನಂತ್'ಕುಮಾರ್ ಇಂದು ತಾವೇ ಒರ್ವ ವಯೋವೃದ್ಧೆಯದುರು ಪೇಚಿಕೆ ಸಿಲುಕಿಸಿದ ಪ್ರಸಂಗ ನಡೆಯಿತು.

ಅಂಕೋಲದಲ್ಲಿ ಜನಸುರಕ್ಷಾ ಯಾತ್ರೆಯ ಕಾರ್ಯಕ್ರಮದಲ್ಲಿ ಸಚಿವರು ರಾಜ್ಯ ಸರ್ಕಾರವನ್ನು ಟೀಕಿಸಿ ಮಾತನಾಡುತ್ತಿದ್ದರು. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣ ಹಾಗೂ ಈಗಿರುವ ಕಾಂಗ್ರೆಸ್ ಸರ್ಕಾರ ದಲ್ಲಿ ಆದ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣ ಕುರಿತು ಅಂಕಿ ಅಂಶಗಳನ್ನು ನೀಡಿ ಸಿದ್ದರಾಮಯ್ಯ ಸರ್ಕಾರವನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು.

ಈ ಸಂದರ್ಭದಲ್ಲಿ ಅಂಕೋಲದ ಹಟ್ಟೀಕೇರಿ ನಿವಾಸಿ ಸುಶೀಲಾ ನಾಯ್ಕ ಎಂಬ ವಯೋವೃದ್ಧೆಯೊಬ್ಬರು ಏಕಾಏಕಿಯಾಗಿ ಎದ್ದು ನಿಂತು, ನೀವು ಕೇಳಿದ ಪ್ರಶ್ನೆಗೆ ನಾನು ಉತ್ತರಿಸುತ್ತೇನೆ. ನಾನು ಕೇಳಿದ ಪ್ರಶ್ನೆಗೆ ನೀವು ಉತ್ತರಿಸಿ'ಎಂದು ಸಚಿವರನ್ನು ಪ್ರಶ್ನಿಸಿದಾಗ ಸಚಿವರು ಒಂದು ಕ್ಷಣ ತಬ್ಬಿಬ್ಬಾದರು.

ನಂತರ  ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಬಿಜೆಪಿ ಕಾರ್ಯಕರ್ತರು ವೃದ್ಧ ಮಹಿಳೆಯನ್ನು ಸಮಾಧಾನಪಡಿಸಿ ಕರೆದೋಯ್ದರು. ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಯೋವೃದ್ಧೆಯ ಪತಿಯನ್ನು ಅನಂತಕುಮಾರ್ ಹೆಗಡೆ ಮಾತನಾಡಿಸಿ ಈ ಪ್ರಹಸನಕ್ಕೆ ತೆರೆ ಎಳೆದರು.

loader