ವಾಷಿಂಗ್ಟನ್ (ಸೆ.29): 9/11 ರಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂತ್ರಸ್ತ ಕುಟುಂಬಗಳಿಗೆ ಸೌದಿ ವಿರುದ್ಧ ಪ್ರಕರಣ ದಾವೆ ಹೂಡುವ ಮಸೂದೆಯನ್ನು ಅಸಿಂಧುಗೊಳಿಸಿದ್ದ ಬರಾಕ್ ಒಬಾಮ ಅವರ ವಿಟೋ ಅಧಿಕಾರದ ವಿರುದ್ಧ ಅಮೆರಿಕ ಸೆನೆಟ್ ಮತಚಲಾವಣೆ ಮಾಡಿದೆ.
ಅಮೆರಿಕ ಅಧ್ಯಕ್ಷರ ವಿಟೋ ಅಧಿಕಾರದ ವಿರುದ್ಧ ಸೆನೆಟ್ ನಲ್ಲಿ ಮತ ಚಲಾವಣೆ ಮಾಡಿರುವುದರಿಂದ, ಸೆನೆಟ್ ನಲ್ಲಿ ಮಂಡನೆಯಾಗಿರುವ ಮಸೂದೆ ಸಿಂಧುವಾಗಿದ್ದು, 9/11 ರ ದಾಳಿ ಸಂತ್ರಸ್ತ ಕುಟುಂಬಗಳು ಸೌದಿ ಅರೇಬಿಯಾ ಮೇಲೆ ದಾವೆ ಹೂಡಲು ಅವಕಾಶ ಸಿಕ್ಕಂತಾಗಿದೆ.
ಅಲ್ಲದೆ 8 ವರ್ಷಗಳ ಅಮೆರಿಕ ಅಧ್ಯಕ್ಷೀಯ ಅವಧಿಯಲ್ಲಿ ಮೊದಲ ಬಾರಿಗೆ ಬರಾಕ್ ಒಬಾಮ ಅವರ ಅಧಿಕಾರಕ್ಕೆ ಸೆನೆಟ್ ಸೆಡ್ಡು ಹೊಡೆದಿದೆ.
