ಲಾಲ್'ಭಾಗ್'ನ ಕೆಲವು ಕಡೆಗಳಲ್ಲಿ ಇನ್ಮುಂದೆ ಸೆಲ್ಫಿ ತೆಗೆಯುವುದನ್ನು ನಿಷೇಧಿಸಲಾಗಿದೆ. ಇತ್ತೀಚೆಗೆ ಸೆಲ್ಫೀ ತೆಗೆದುಕೊಳ್ಳುವ ಭರದಲ್ಲಿ ವಿಕ್ರಂ ಎಂಬ ಬಾಲಕನೊಬ್ಬ ಕಲ್ಲು ಕಂಬದ ಕೆಳಗೆ ಬಿದ್ದು ಅಸು ನೀಗಿದ್ದ. ಈ ದುರಂತದ ಬಳಿಕ ಎಚ್ಚೆತ್ತ ಆಡಳಿತ ಮಂಡಳಿ ಕೊನೆಗೂ ಇಂತಹುದೊಂದು ದಿಟ್ಟ ಕ್ರಮವನ್ನು ಜಾರಿಗೊಳಿಸಿದೆ.
ಬೆಂಗಳೂರು(ಜ.18): ಲಾಲ್'ಭಾಗ್'ನ ಕೆಲವು ಕಡೆಗಳಲ್ಲಿ ಇನ್ಮುಂದೆ ಸೆಲ್ಫಿ ತೆಗೆಯುವುದನ್ನು ನಿಷೇಧಿಸಲಾಗಿದೆ. ಇತ್ತೀಚೆಗೆ ಸೆಲ್ಫೀ ತೆಗೆದುಕೊಳ್ಳುವ ಭರದಲ್ಲಿ ವಿಕ್ರಂ ಎಂಬ ಬಾಲಕನೊಬ್ಬ ಕಲ್ಲು ಕಂಬದ ಕೆಳಗೆ ಬಿದ್ದು ಅಸು ನೀಗಿದ್ದ. ಈ ದುರಂತದ ಬಳಿಕ ಎಚ್ಚೆತ್ತ ಆಡಳಿತ ಮಂಡಳಿ ಕೊನೆಗೂ ಇಂತಹುದೊಂದು ದಿಟ್ಟ ಕ್ರಮವನ್ನು ಜಾರಿಗೊಳಿಸಿದೆ.
ಲಾಲ್ ಬಾಗ್'ನ ಇಳಿಜಾರು ಪ್ರದೇಶ, ಕೆರೆದಂಡೆ ಸೇರಿದಂತೆ ಒಟ್ಟು 15 ಕಡೆಗಳಲ್ಲಿ ಸೆಲ್ಫೀ ತೆಗೆಯದಂತೆ ಇಲ್ಲಿನ ಆಡಳಿತ ಮಂಡಳಿ ನಿಷೇಧ ಹೇರಿದೆ. ಇನ್ನು ಜನವರಿ 20ರಿಂದ ಇಲ್ಲಿ ಫ್ಲವರ್ ಶೋ ಆರಂಭವಾಗೊಳ್ಳಲಿದೆ. ಈ ಸಂದರ್ಭದಲ್ಲಿ ಜನಸ್ತೋಮವೇ ಇಲ್ಲಿ ಹರಿದು ಬರುವ ಕಾರಣದಿಂದ ಆಡಳಿತ ಮಂಡಳಿ ಮುಂಜಾಗೃತಾ ಕ್ರಮವಾಗಿ ಈ ನಿರ್ಧಾರ ಕೈಗೊಂಡಿದೆ.
