ನವದೆಹಲಿ(ಸೆ.16): ಪ್ರಯಾಣಿಕರ ಸುರಕ್ಷತಾ ನಿಟ್ಟಿನಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿರುವ ನಾಗರೀಕ ವಿಮಾನಯಾನ ನಿರ್ದೇಶನಾಲಯ ವಿಮಾನದ ಬಳಿ ನಿಂತು ಫೋಟೋ ತೆಗೆಯುವುದನ್ನು ನಿಷೇಧಿಸಿದೆ. ಕೇವಲ ಪ್ರಯಾಣಿಕರಿಗೆ ಮಾತ್ರವಲ್ಲದೇ ವಿಮಾನದ ಸಿಬ್ಬಂದಿಗಳು ಕೂಡ ವಿಮಾನ ಪ್ರಯಾಣದ ವೇಳೆ ಫೋಟೋಗ್ರಫಿ ಮಾಡದಂತೆ ಡಿಜಿಸಿಎ ಹೇಳಿದೆ.
ಇತ್ತೀಚೆಗೆ ವಿಮಾನಗಳ ಬಳಿ ನಿಂತು ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಸೆಲ್ಫಿ ಕ್ಲಿಕ್ಕಿಸುತ್ತಿದ್ದರು. ಈ ಬಗ್ಗೆ ಡಿಜಿಸಿಎಗೆ ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿ ನಾಗರೀಕ ವಿಮಾನಯಾನ ನಿರ್ದೇಶನಾಲಯ ಈ ಮಹತ್ವದ ನಿರ್ಣಯ ಕೈಗೊಂಡಿದೆ.
ಡಿಜಿಸಿಎ ವಿಮಾನ ಪ್ರಯಾಣ ವೇಳೆ ಸೆಲ್ಫಿ ಫೋಟೋ ಕ್ಲಿಕ್ಕಿಸುವುದರಿಂದ ಪೈಲಟ್'ಗಳ ಏಕಾಗ್ರತೆ ಹಾಳಾಗುತ್ತದೆ ಎಂಬ ಕಾರಣದಿಂದ ಸೆಲ್ಫಿ ನಿಷೇದಿಸಲಾಗಿದೆ.
