ಮುನಿಸಿಕೊಂಡವರು ಒಂದಾದರು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 31, Jul 2018, 4:12 PM IST
Selected part of Prashanth natu july 31st India gate Column
Highlights

  • ಶೋಭಾ ಹಾಗೂ ಸದಾನಂದ ಗೌಡ ಅವರು ಹಾವು - ಮುಂಗುಸಿಯಂತೆ ಇದ್ದರು
  • ಚುನಾವಣಾ ಕಾರಣದಿಂದ ಒಂದಾಗಿರುವ ಇಬ್ಬರು ನಾಯಕರು

ಯಡಿಯೂರಪ್ಪನವರ ಕಾರಣದಿಂದ ಹಾವು ಮುಂಗುಸಿಯಂತೆ ಆಗಿದ್ದ ಶೋಭಾ ಕರಂದ್ಲಾಜೆ ಮತ್ತು ಸದಾನಂದಗೌಡರು ಈಗ ಮತ್ತೆ ಕ್ಲೋಸ್ ಆಗಿದ್ದಾರೆ. ಉಡುಪಿಗೆ ಶೋಭಾ ನಿಲ್ಲುವುದಿಲ್ಲ ಎಂದು ಹೇಳುತ್ತಾ ಖುಷಿಯಾಗಿರುವ ಸದಾನಂದಗೌಡರು ನಿಧಾನವಾಗಿ ಅಲ್ಲಿಗೆ ಹೋಗಿ ತಾನೇ ನಿಲ್ಲಲು ಪ್ರಯತ್ನ ಆರಂಭಿಸುತ್ತಿದ್ದಾರೆ. 

ಉಡುಪಿಯವರು ಯಾರಾದರೂ ಬಂದರೆ ಪಕ್ಕಕ್ಕೆ ಕರೆದುಕೊಂಡು ಹೋಗುವ ಸದಾನಂದಗೌಡರು ಬೆಂಗಳೂರಿನಲ್ಲಿ ಚುನಾವಣೆಗೆ ನಿಲ್ಲಬೇಕಾದರೆ ದುಡ್ಡು ಬೇಕು, ನಾನು ಉಡುಪಿಗೆ ಬಂದು ನಿಂತರೆ ಹೇಗೆ? ಸ್ವಲ್ಪ ನಿಮ್ಮದೇ ಜನರಲ್ಲಿ ಸರ್ವೇ ಮಾಡಿ ಹೇಳಿ ಎನ್ನುತ್ತಾರೆ. ಇನ್ನು ರಾಜ್ಯ ಬಿಜೆಪಿಯವರು ಸಿಕ್ಕಿದರೆ ಶೋಭಕ್ಕನನ್ನು ಹಾಡಿ ಹೊಗಳುವ ಸದಾನಂದಗೌಡರು ಅವರಿಗೆ ಯಶವಂತಪುರಕ್ಕೆ ಟಿಕೆಟ್ ಕೊಟ್ಟಿದ್ದರೆ ಗೆದ್ದುಬಿಡುತ್ತಿದ್ದರು, ಅವರು ಡೈನಾಮಿಕ್ ಮಾರಾಯ್ರೆ ಎನ್ನುತ್ತಾರೆ. ಹಿಂದೊಮ್ಮೆ ಉಡುಪಿಯಿಂದಾಗಿಯೇ ಜಗಳ ಶುರುಹಚ್ಚಿಕೊಂಡಿದ್ದ ಇಬ್ಬರು ಈಗ ಉಡುಪಿಗೋಸ್ಕರವೇ ಒಂದಾಗುತ್ತಿದ್ದಾರೆ.

[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]

loader