ದೇವೇಗೌಡರಿಗೆ ಸಿಎಂ ಇಬ್ರಾಹಿಂ ಏಕೆ ಬೇಡ?

First Published 13, Mar 2018, 8:40 PM IST
Selected Part Of Prashanth Natu India Gate Column
Highlights

ಫ್ರೆಂಡ್ ಇಬ್ರಾಹಿಂ ಯಾಕೆ ಜೆಡಿಎಸ್‌ಗೆ ಬರಲಿಲ್ಲ ಎಂದರೆ, ‘ರಾಜ್ಯ ಅಧ್ಯಕ್ಷ ಮಾಡಬೇಕಂತೆ, ರಾಜ್ಯಸಭೆಗೆ ಕಳಿಸಬೇಕಂತೆ, ಅದೆಲ್ಲ ಆಗೋಲ್ಲ ಬಿಡೋಲ್ಲ. ನೀರಿನ ಆಳ ಅಳೆಯೋಕೆ ಬಂದಿರ್ತಾರೆ ಬಿಡಿ’ ಎಂದರು

ಕಾವೇರಿ ನಿರ್ವಹಣಾ ಮಂಡಳಿ ಬಗ್ಗೆ ಬಿಜೆಪಿ, ಕಾಂಗ್ರೆಸ್‌ನವರು ಚಕಾರ ಎತ್ತೋಕೆ ತಯಾರಿಲ್ಲದೆ ಹೋದರೂ ಈ ವಯಸ್ಸಿನಲ್ಲಿ ಗಡ್ಕರಿ ಜೊತೆಗಿನ ಅರ್ಧ ಗಂಟೆಯ ಸಭೆಗೆಂದು ದೇವೇಗೌಡರು ಬೆಂಗಳೂರಿನಿಂದ ದಿಲ್ಲಿಗೆ ಬಂದಿದ್ದರು. ಕಾವೇರಿ ತೀರ್ಪು ಬಂದರೆ ಸಿದ್ದರಾಮಯ್ಯ ಸಿಹಿ ಹಂಚುತ್ತ ಕುಳಿತರಲ್ಲರೀ.. ನನಗೆ ತಡೆಯೋಕೆ ಆಗೋಲ್ಲ. ಐ ವಿಲ್ ಫೈಟ್. ಇದಕ್ಕೇ ಪ್ರಾದೇಶಿಕ ಪಕ್ಷ ಬೇಕು ಎಂದು ಜೋರಾಗಿ ಹೇಳುತ್ತಿದ್ದರು. ನಿಮ್ ಫ್ರೆಂಡ್ ಇಬ್ರಾಹಿಂ ಯಾಕೆ ಜೆಡಿಎಸ್‌ಗೆ ಬರಲಿಲ್ಲ ಎಂದರೆ, ‘ರಾಜ್ಯ ಅಧ್ಯಕ್ಷ ಮಾಡಬೇಕಂತೆ, ರಾಜ್ಯಸಭೆಗೆ ಕಳಿಸಬೇಕಂತೆ, ಅದೆಲ್ಲ ಆಗೋಲ್ಲ ಬಿಡೋಲ್ಲ. ನೀರಿನ ಆಳ ಅಳೆಯೋಕೆ ಬಂದಿರ್ತಾರೆ ಬಿಡಿ’ ಎಂದರು. ಪ್ರಜ್ವಲ್ ಬಗ್ಗೆ ಭಾಳ ಜನ ಒಳ್ಳೇದು ಮಾತಾಡಿದ್ದಾರೆ, ನೋಡೋಣ ಎಂದು ಅಜ್ಜ ಮೊಮ್ಮಗನ ಬಗ್ಗೆ ಹೇಳೋವಾಗ ಮಾತ್ರ ಸ್ವಲ್ಪ ಆರ್ದ್ರರಾಗಿದ್ದರು

-ಪ್ರಶಾಂತ್ ನಾತೂ ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ

(ಸಾಂದರ್ಭಿಕ ಚಿತ್ರ)

loader