ಗೌಡರು ಪ್ರಧಾನಿಯಾಗಿದ್ದಾಗ ರಾಯಭಾರಿಗೆ ಮುದ್ದೆ ತಿನ್ನಿಸಲು ಹೋಗಿದ್ದ ಸಚಿವ !

Selected Part of Prashanth Natu Column at july 03
Highlights

  • ಏಷ್ಯಾದ ರಾಯಭಾರಿಯೊಬ್ಬರಿಗೆ ಮುದ್ದೆ ತಿನ್ನಿಸಲು ಹೋಗಿದ್ದ ಸಿ.ಎಂ. ಇಬ್ರಾಹಿಂ
  • ಗೌಡರ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ ಎಂದಿದ್ದ ಕೇಂದ್ರದ ಮಾಜಿ ಸಚಿವ 

ಒಮ್ಮೆ ಬಿಜೆಪಿ ಜೊತೆ ಹೋದ ತಪ್ಪಿಗೆ ಕಮ್ಯುನಿಸ್ಟರು ತನ್ನನ್ನು ನಂಬುವುದಿಲ್ಲ ಎಂದು ಗೊತ್ತಾದ ಮೇಲೆ ದೇವೇಗೌಡರು ಮಾಯೆಯ ಮೊರೆ ಹೋಗಿದ್ದಾರೆ. ಬಿಎಸ್‌ಪಿಗೆ ಮಂತ್ರಿ ಪದವಿ ಕೊಟ್ಟ ಗೌಡರು ಲೋಕಸಭಾ ಸೀಟು ಕೂಡ ಕೊಡುತ್ತೇವೆ ಎಂದಿದ್ದು ಸೋಜಿಗ. 

ಹಾಗೇ ಸುಮ್ಮನೆ ಗೌಡರು ಯಾರಿಗೂ ಒಂದು ಗುಲಗಂಜಿ ಕೂಡ ಕೊಡೋರಲ್ಲ. ಬಹುಶಃ ಲೋಕಸಭಾ ಚುನಾವಣೆ ನಂತರ ದಿಲ್ಲಿಯಲ್ಲಿ ಒಂದು ಗಟ್ಟಿ ಮೈತ್ರಿ ಇದ್ದರೆ ಮತ್ತೊಮ್ಮೆ ಪ್ರಭಾವಿ ಆಗಬಹುದು ಎಂಬ ಯೋಚನೆಯಿಂದ ಗೌಡರು ಮಾಯಾವತಿ ಬಗ್ಗೆ ಮಮಕಾರ ತೋರಿಸುತ್ತಿದ್ದಾರೆ. ದೇವೇಗೌಡರ ಕೇರಂ ಆಟ ಅರ್ಥ ಆಗೋದು ಕಷ್ಟ. ಎಲ್ಲಿಂದ ಎಲ್ಲಿಗೆ ರಾಣಿಯನ್ನು ಬೀಳಿಸುತ್ತಾರೋ ಹೇಳಲಿಕ್ಕೆ ಆಗದು.

ದಶಕಗಳ ಹಿಂದೆ ಗೌಡರು ಪ್ರಧಾನಿ ಆಗಿದ್ದಾಗ ಪಶ್ಚಿಮ ಏಷ್ಯಾದ ರಾಯಭಾರಿ ಒಬ್ಬ, ‘ವಾಟ್ ಈಸ್ ಗೌಡಾಸ್ ಥಿಂಕಿಂಗ್’ ಎಂದು ಯಾವುದೋ ವಿಷಯದಲ್ಲಿ ಸಿಎಂ ಇಬ್ರಾಹಿಂ ಅವರಿಗೆ ಕೇಳಿದರಂತೆ. ತಕ್ಷಣ ಡಿಪ್ಲೊಮ್ಯಾಟ್‌ನನ್ನು ಹತ್ತಿರ ಕರೆದ ಇಬ್ರಾಹಿಂ ‘ರಾಗಿ ಮುದ್ದೆ ತಿನ್ನು’ ಎಂದರಂತೆ. ಪಾಪ ರಾಯಭಾರಿಗೆ ಮುದ್ದೆ ತಿನ್ನಲೂ ಆಗದು ನುಂಗಲೂ ಆಗದು. ಆತನ ಸ್ಥಿತಿ ನೋಡಿ ಇಬ್ರಾಹಿಂ, ‘ದಿಸ್ ಈಸ್ ಮಿಸ್ಟರ್ ಗೌಡ. ನೆವರ್ ಅಂಡರೆಸ್ಟಿಮೇಟ್’ ಎಂದು ಹೇಳಿದರಂತೆ.

[ಪ್ರಶಾಂತ್ ನಾತು ಅವರ ಅಂಕಣದ ಆಯ್ದ ಭಾಗ]

 

loader