ಒಂದೇ ಸ್ಕೂಟರ್‌ನಲ್ಲಿ ಓಡಾಡುತ್ತಿದ್ದವರು ಈಗ ವಿರೋಧಿಗಳು

First Published 23, Jan 2018, 10:33 PM IST
Selected Part of Prashanth natu Column
Highlights

2002ರಲ್ಲಿ ಮೋದಿ ಅವರನ್ನು ಅಡ್ವಾಣಿ ಮುಖ್ಯಮಂತ್ರಿ ಮಾಡಲು ತೊಗಾಡಿಯಾ ಬೆಂಬಲ ಕೂಡ ಇತ್ತು. ಅಷ್ಟೇ ಅಲ್ಲ, ಹೊಸದಾಗಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ತೊಗಾಡಿಯಾಗೆ ಆಪ್ತರಾಗಿದ್ದ ಗೋವರ್ಧನ್ ಜಡಾಫಿಯಾ ಅವರನ್ನು ಗೃಹಮಂತ್ರಿ ಕೂಡ ಮಾಡಿದ್ದರು.

ಹಾಗೆ ನೋಡಿದರೆ 1976ರಲ್ಲಿ ಅಹಮದಾಬಾದ್‌ನಲ್ಲಿ ಸಂಘದ ಶಾಖೆಗೆ ಒಟ್ಟಿಗೇ ಹೋಗುವುದರೊಡನೆ ಆರಂಭವಾಗಿದ್ದ ಮೋದಿ ಮತ್ತು ತೊಗಾಡಿಯಾ ಸ್ನೇಹ 2002ರವರೆಗೂ ಅಣ್ಣ ತಮ್ಮಂದಿರ ರೀತಿಯಲ್ಲೇ ಇತ್ತು. ತೊಗಾಡಿಯಾ ಮತ್ತು ಮೋದಿ ಒಂದೇ ಸ್ಕೂಟರ್‌ನಲ್ಲಿ ಓಡಾಡಿದ್ದನ್ನು ನೋಡಿದವರಿದ್ದಾರೆ.

2002ರಲ್ಲಿ ಮೋದಿ ಅವರನ್ನು ಅಡ್ವಾಣಿ ಮುಖ್ಯಮಂತ್ರಿ ಮಾಡಲು ತೊಗಾಡಿಯಾ ಬೆಂಬಲ ಕೂಡ ಇತ್ತು. ಅಷ್ಟೇ ಅಲ್ಲ, ಹೊಸದಾಗಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ತೊಗಾಡಿಯಾಗೆ ಆಪ್ತರಾಗಿದ್ದ ಗೋವರ್ಧನ್ ಜಡಾಫಿಯಾ ಅವರನ್ನು ಗೃಹಮಂತ್ರಿ ಕೂಡ ಮಾಡಿದ್ದರು. ಗುಜರಾತ್ ದಂಗೆಗಳ ಸಮಯದಲ್ಲಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿದ್ದು ಕೂಡ ತೊಗಾಡಿಯಾ ಎನ್ನಲಾಗುತ್ತದೆ.

ಅತ್ಯಂತ ಕಡಿಮೆ ಸಂಖ್ಯೆ ಇರುವ ಗಾಣಿಗರ ಸಮುದಾಯದ ಮೋದಿ ಕೇಶುಭಾಯಿ ಪಟೇಲ್‌ರ ವಿರೋಧವಿದ್ದ ಕಾರಣ ಅಮ್ರೇಲಿ ಪಟೇಲರಾದ ತೊಗಾಡಿಯಾ ಬೆಂಬಲದ ಮೇಲೆ ಅವಲಂಬಿತರಾಗಿದ್ದರು. ಆದರೆ ಯಾವಾಗ ತೊಗಾಡಿಯಾ ಪೊಲೀಸ್ ವರ್ಗಾವಣೆಗಳಲ್ಲಿ ಸಕ್ರಿಯರಾಗಲು ತೊಡಗಿದರೋ ಮೋದಿಗೆ ಇಷ್ಟವಾಗಲಿಲ್ಲ. ಯಾವಾಗ ಮೋದಿ ಚುನಾವಣೆ ಗೆದ್ದರೋ ಆಗ

ಮೋದಿ ಮಾಡಿದ ಮೊದಲ ಕೆಲಸ ತೊಗಾಡಿಯಾ ಬೆಂಬಲಿಗರನ್ನು ಸಂಪುಟದಿಂದ ಕಿತ್ತುಹಾಕಿದ್ದು. ಹೀಗೆ 15 ವರ್ಷಗಳ ಹಿಂದೆ ಶುರುವಾಗಿದ್ದ ಮೋದಿ ತೊಗಾಡಿಯಾ ಜಗಳ ಈಗ ಕ್ಲೈಮ್ಯಾಕ್ಸ್'ಗೆ ತಲುಪಿದೆ. ಬಲಶಾಲಿಯಾಗಿ ಹೊರಹೊಮ್ಮಿರುವ ತನ್ನದೇ ಗೆಳೆಯನ ಮುಂದೆ ತೊಗಾಡಿಯಾ ನಿಸ್ಸಹಾಯಕರಾಗಿದ್ದಾರೆ.

(ಪ್ರಶಾಂತ್ ನಾತು ಅವರ ಅಂಕಣದ ಆಯ್ದ ಭಾಗ)

loader