Asianet Suvarna News Asianet Suvarna News

ಗ್ರಾಹಕರಿಗೆ ಪೆಟ್ರೋಲ್ ಬಂಕ್'ಗಳಲ್ಲೂ ಹೊಸ ನೋಟಿನ ಸೌಲಭ್ಯ

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ., ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ., ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಸಂಸ್ಥೆಗಳೊಂದಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ.

Select Petrol Pumps Through Debit Or Credit Cards

ನವದೆಹಲಿ(ನ.17): ನೋಟು ರದ್ದಿನ ಪರಿಣಾಮ ಬ್ಯಾಂಕ್,ಎಟಿಎಂ ಹಾಗೂ ಅಂಚೆ ಕಚೇರಿಗಳಲ್ಲಿ ಸರದಿ ಸಾಲುಗಳನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರವು ಮತ್ತೊಂದು ವಿನೂತನ ಸೌಲಭ್ಯ ಒದಗಿಸಿದೆ. ಗ್ರಾಹಕರು ಪೆಟ್ರೊಲ್ ಬಂಕ್'ಗಳಲ್ಲಿ ಕ್ರೆಡಿಟ್ ಕಾರ್ಡ್. ಡೆಬಿಟ್ ಕಾರ್ಡ್'ಗಳ ಸ್ವೈಪ್ ಮಾಡುವ ಮೂಲಕ ಹೊಸ ನೋಟುಗಳು ಅಥವಾ ನೂರರ ನೋಟುಗಳನ್ನು ಪಡೆಯಬಹುದು.

ನಿತ್ಯ ಒಬ್ಬ ವ್ಯಕ್ತಿಗೆ 2 ಸಾವಿರ ಮಾತ್ರ ನೀಡಲಾಗುತ್ತದೆ. ಆದರೆ ಇಲ್ಲಿ ಕ್ರೆಡಿಟ್ ಹಾಗೂ ಡೆಬಿಟ್ ಈ ಸೌಲಭ್ಯ ಲಭ್ಯವಾಗಲಿದೆ. ಈ ಸೇವೆ ಒದಗಿಸಲು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ., ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ., ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಸಂಸ್ಥೆಗಳೊಂದಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ.

ಸೌಲಭ್ಯವು ನ.24 ರಿಂದ ಆರಂಭವಾಗಲಿದ್ದು, ಪ್ರಾರಂಭದಲ್ಲಿ  2,500 ಪೆಟ್ರೋಲ್ ಪಂಪ್'ಗಳಲ್ಲಿ ಸೇವೆ ಒದಗಿಸಲಾಗುತ್ತದೆ. ನಂತರದ ಅವಧಿಯಲ್ಲಿ 20 ಸಾವಿರ ಪಂಪ್'ಗಳಿಗೆ ವಿಸ್ತರಿಸಲಾಗುತ್ತದೆ.ಅಲ್ಲದೆ ರದ್ದಾದ ನೋಟುಗಳನ್ನು ಪೆಟ್ರೋಲ್ ಬಂಕ್'ಗಳಲ್ಲಿ ನ.24ರವರೆಗೆ ಮಾತ್ರ ಸ್ವೀಕರಿಸಲಾಗುತ್ತದೆ.

Follow Us:
Download App:
  • android
  • ios