ಬಿಹಾರ ವೈಶಾಲಿ ಜಿಲ್ಲೆ ಬಳಿ ಸೀಮಾಂಚಲ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಘಟನೆ ನಡೆದಿದೆ. ರೈಲು ದುರಂತದಲ್ಲಿ 7 ಮಂದಿ ಸಾಪನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವೈಶಾಲಿ(ಫೆ.03): ಬೆಳ್ಳಂಬೆಳಗ್ಗೆ ರೈಲು ಅಪಘಾತ ಸಂಭವಿಸಿದೆ. ಬಿಹಾರದ ವೈಶಾಲಿ ಜಿಲ್ಲಿ ಬಳಿ ಸೀಮಾಂಚಲ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ 7 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಂದು(ಫೆ.03) ಬೆಳಗಿನ ಜಾವ 3.38ರ ಸುಮಾರಿಗೆ ರೈಲು ಸಹದೈ ಬುಝರ್ಗ್ ಬಲಿ ಹಳಿ ತಪ್ಪಿದೆ.
ಇದನ್ನೂ ಓದಿ: ಮಮತಾ ವಿರುದ್ಧ ಮೋದಿ ಗುಡುಗು
ಸಾಮಾನ್ಯ ಬೋಗಿ, ಎಸಿ ಕೋಚ್ B3, 3 ಸ್ಲೀಪರ್ ಕೋಚ್(S8, S9, S10) ಸೇರಿಂದೆತ ಒಟ್ಟು 9 ಬೋಗಿಗಳು ಹಳಿ ತಪ್ಪಿದೆ ಎಂದು ಈಸ್ಟರ್ನ್ ರೈಲ್ಪೇ ವಕ್ತಾರ ರಾಜೇಶ್ ಕುಮಾರ್ ಹೇಳಿದ್ದಾರೆ. ಸದ್ಯ ರಕ್ಷಣಾ ಕಾರ್ಯ ಸಾಗುತ್ತಿದೆ. ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ರಕ್ಷಣಾ ಕಾರ್ಯದ ಸಹಾಯವಾಣಿ ನಂಬರ್‌ಗಳನ್ನ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೀಮಾಂತಲ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಪರಿಣಾಮ 3 ರೈಲುಗಳ ರಸ್ತೆ ಮಾರ್ಗ ಬದಲಿಸಲಾಗಿದೆ. ಇನ್ನು ಬರೌನಿ-ಪಾಟ್ನ, ಬರೌನಿ ಪಾಟಲಿಪುತ್ರಾ ಪ್ಯಾಸೆಂಜರ್ ಹಾಗೂ ಸೋನ್ಪುರ್ ಬರೌನಿ MEMU ರೈಲು ರದ್ದಾಗಿದೆ.
ಇದನ್ನೂ ಓದಿ:ಮಿಸ್ಡ್ ಕಾಲ್‌ಗಳಿಂದ ಸಿಕ್ಕಿಬಿದ್ದ ರವಿ ಪೂಜಾರಿ!
