ಪಟನಾ: ಬಿಹಾರಕ್ಕೆ ಸಂಬಂಧಿಸಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದುದಕ್ಕಾಗಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾ. ಮಾರ್ಕಾಂಡೇಯ ಕಾಟ್ಜು ವಿರುದ್ಧ ಹಲವೆಡೆ ದೇಶದ್ರೋಹ ದೂರು ದಾಖಲಿಲಾಗಿದೆ. ಪಾಕಿಸ್ತಾನಕ್ಕೆ ಬಿಹಾರವನ್ನೂ ತೆಗೆದುಕೊಳ್ಳುವ ಷರತ್ತಿನ ಮೇರೆಗೆ ಕಾಶ್ಮೀರವನ್ನು ನೀಡಬಹುದು ಎಂದು ನ್ಯಾ. ಕಾಟ್ಜು ತಿಳಿಸಿದ್ದರು. ಮಂಗಳವಾರ ಜೆಡಿಯು ಎಂಎಲ್‌ಸಿ, ವಕ್ತಾರ ನೀರಜ್ ಕುಮಾರ್ ದೂರು ದಾಖಲಿಸಿದ್ದಾರೆ. ಬುಧವಾರ ಮತ್ತೆ ಕಾಟ್ಜು ವಿರುದ್ಧ ಇನ್ನಷ್ಟು ಆನ್'ಲೈನ್ ಪೋಸ್ಟ್'ಗಳಿಗಾಗಿ ದೂರು ದಾಖಲಾಗಿದೆ. ಶಾಸ್ತ್ರಿನಗರ ಪೊಲೀಸ್ ಠಾಣೆಯಲ್ಲಿ ನ್ಯಾ. ಕಾಟ್ಜು ವಿರುದ್ಧ ದೂರು ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. ಪಟನಾ ಸಿಜೆಎಂ ಕೋರ್ಟ್‌ನಲ್ಲಿ ನ್ಯಾಯವಾದಿ ಅರವಿಂದ ಕುಮಾರ್ ಎಂಬವರೂ ದೂರು ದಾಖಲಿಸಿದ್ದಾರೆ.
(ಕೃಪೆ: ಕನ್ನಡಪ್ರಭ)
