ರಾಜ್ಯದಲ್ಲಿ ನಡೆಯುತ್ತಿರುವ ಹಿಂದು ಕಾರ್ಯಕರ್ತರ ಹತ್ಯೆಗೆ ಪಿಎಫ್'ಐ, ಕೆಎಫ್'ಡಿಐ ಮತ್ತು ಎಸ್‌ಡಿಪಿಐ ಕಾರಣ. ಆ ಸಂಘಟನೆಗಳನ್ನು ನಿಷೇಧಿಸಬೇಕು. ಅವುಗಳಿಗೆ ಸಚಿವ ರಮಾನಾಥ ರೈ ಬೆಂಬಲ ನೀಡುತ್ತಿದ್ದು, ಅವರು ರಾಜೀನಾಮೆ ನೀಡಬೇಕು ಹಾಗೂ ಈ ಹತ್ಯೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ರಾಜ್ಯ ಬಿಜೆಪಿ ಯುವಮೋರ್ಚಾ ಮಂಗಳವಾರದಿಂದ ‘ಮಂಗಳೂರು ಚಲೋ’ ಎಂಬ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದೆ. ಆದರೆ ಇದೀಗ ಪೊಲೀಸ್ ಬೇಹುಗಾರಿಕಾ ವರದಿಯಲ್ಲಿ ಮಾತ್ರ ಬೇರೆಯೇ ಮಹತ್ವದ ಅಂಶ ಬಯಲಾಗಿದೆ.

ಮಂಗಳೂರು(ಸೆ.05): ರಾಜ್ಯದಲ್ಲಿ ನಡೆಯುತ್ತಿರುವ ಹಿಂದು ಕಾರ್ಯಕರ್ತರ ಹತ್ಯೆಗೆ ಪಿಎಫ್'ಐ, ಕೆಎಫ್'ಡಿಐ ಮತ್ತು ಎಸ್‌ಡಿಪಿಐ ಕಾರಣ. ಆ ಸಂಘಟನೆಗಳನ್ನು ನಿಷೇಧಿಸಬೇಕು. ಅವುಗಳಿಗೆ ಸಚಿವ ರಮಾನಾಥ ರೈ ಬೆಂಬಲ ನೀಡುತ್ತಿದ್ದು, ಅವರು ರಾಜೀನಾಮೆ ನೀಡಬೇಕು ಹಾಗೂ ಈ ಹತ್ಯೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ರಾಜ್ಯ ಬಿಜೆಪಿ ಯುವಮೋರ್ಚಾ ಮಂಗಳವಾರದಿಂದ ‘ಮಂಗಳೂರು ಚಲೋ’ ಎಂಬ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದೆ. ಆದರೆ ಇದೀಗ ಪೊಲೀಸ್ ಬೇಹುಗಾರಿಕಾ ವರದಿಯಲ್ಲಿ ಮಾತ್ರ ಬೇರೆಯೇ ಮಹತ್ವದ ಅಂಶ ಬಯಲಾಗಿದೆ.

ಬಿಜೆಪಿಯ ರ್ಯಾಲಿ ಕುರಿತಾಗಿ ರಾಜ್ಯ ಪೊಲೀಸರಿಗೆ ಬೇಹುಗಾರಿಕಾ ವರದಿ ಸಿಕ್ಕಿದೆ. ಈ ವರದಿಯಲ್ಲಿ ವಿರೋಧದ ನಡುವೆಯೂ ಬಿಜೆಪಿ ರ್ಯಾಲಿ ನಡೆಸಲು ಹಠಕ್ಕೆ ಬಿದ್ದಿರುವುದೇಕೆ? ಹೀಗಿದ್ದರೂ ಪೊಲೀಸರು ಅನುಮತಿ ಯಾಕೆ ನೀಡುತ್ತಿಲ್ಲ ೆಂಬ ಮಹತ್ವದ ಮಾಹಿತಿ ಬಯಲಾಗಿದೆ. ಸುವರ್ಣ ನ್ಯೂಸ್ ಪೊಲೀಸ್ ಮೂಲಗಳಿಂದ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಬಿಜೆಪಿಯು ಈ ಱಲಿ ಮಾರ್ಗದಲ್ಲಿ ಕಿಲೋ ಮೀಟರ್​'​ಗೆ ಮೋದಿ ಹೆಸರು ಪ್ರಸ್ತಾಪವಾಗಬೇಕು ಎದು ತೀರ್ಮಾನಿಸಿದೆ. ಅಲ್ಲದೇ ಪೊಲೀಸರು ಇರುವ ಕಡೆ ಹೆಚ್ಚು ಹೆಚ್ಚು ಘೋಷಣೆ ಕೂಗುವುದರೊಂದಿಗೆ, ಪ್ರತಿ 20 ಕಿಲೋ ಮೀಟರ್​'ಗಳಿಗೆ ಆಯಾ ಸಂಘಟನೆಗಳ ಬೈಠಕ್ ನಡೆಸಬೇಕೆಂದು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಇದೇ ಕಾರಣದಿಂದ ಪೊಲೀಸರು ಈ ಱಲಿಗೆ ಅನುಮತಿ ನಿರಾಕಸಿರುವುದಾಗಿ ತಿಳಿದು ಬಂದಿದೆ.