ಬರ್ಲಿನ್(ಜೂ.15): ದ್ವಿತೀಯ ವಿಶ್ವಯುದ್ಧ ಮುಗಿದು ಬರೋಬ್ಬರಿ 75 ವರ್ಷಗಳೇ ಉರುಳಿವೆ. ಆದರೆ ಜಗತ್ತು ಕಂಡ ಅತ್ಯಂತ ಭೀಕರ ಯುದ್ಧದ ಕುರುಹುಗಳು ಮಾತ್ರ ಇಂದಿಗೂ ಸಿಗುತ್ತಲೇ ಇವೆ.

ಅದರಂತೆ ಬರ್ಲಿನ್ ಬಳಿ ಎರಡನೇ ಮಹಾಯುದ್ಧದ ಕಾಲದಲ್ಲಿ ಅಮೆರಿಕದಲ್ಲಿ ತಯಾರಿಸಲಾಗಿದ್ದ ಜೀವಂತ ಬಾಂಬ್ ವೊಂದು ಪತ್ತೆಯಾಗಿದೆ. ಇಲ್ಲಿನ ಅಲೆಕ್ಸಾಂಡರ್‌ಪ್ಲಾಟ್ಜ್ ಬಳಿ ಬರೋಬ್ಬರಿ 100 ಕೆಜಿ ತೂಕದ ಜೀವಂತ ಬಾಂಬ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ಮೀಟರ್ ನೆಲದಾಳದಲ್ಲಿ ನಿರ್ಮಾಣ ಹಂತದಲ್ಲಿ ಕಟ್ಟಡದ ಬಳಿ ಈ ಬಾಂಬ್ ಪತ್ತೆಯಾಗಿದ್ದು, ಕೂಡಲೇ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಆ ಬಳಿಕ ಬಾಂಬ್ ನ್ನು ನಿಷ್ಕ್ರೀಯಗೊಳಿಸಲಾಗಿದ್ದು, ತಮ್ಮ ಮನೆಗಳಿಗೆ ಮರಳುವಂತೆ ಜನರಿಗೆ ಪೊಲೀಸರು ಮನವಿ ಮಾಡಿದ್ದಾರೆ.

ಎರಡನೇ ಮಹಾಯದ್ಧದ ಅಂತಿಮ ಘಟ್ಟದಲ್ಲಿ ಜರ್ಮನಿ ವಿರುದ್ಧದ ನಿರ್ಣಾಯಕ ಕದನದಲ್ಲಿ ಬರ್ಲಿನ್ ವಶಪಡಿಸಿಕೊಂಡಿದ್ದ ಮಿತ್ರಪಡೆಗಳು, ಅಮೆರಿಕದಲ್ಲಿ ತಯಾರಿಸಲಾಗಿದ್ದ ಈ ಬಾಂಬ್ ನ್ನು ಹುದುಗಿಸಿಟ್ಟಿದ್ದವು ಎನ್ನಲಾಗಿದೆ.