ಪರೀಕ್ಷೆಗೂ ಮುನ್ನ ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಬಹಿರಂಗ?
ಶಹಾಪುರದಲ್ಲಿ ಕನ್ನಡ ಪತ್ರಿಕೆ ಲೀಕ್ ಆದ ಬಗ್ಗೆ ವಾಟ್ಸಾಪಲ್ಲಿ ಸಂದೇಶ ಹರಿದಾಡುತ್ತಿದ್ದು, ಅದರಲ್ಲಿ ಪ್ರಶ್ನೆಪತ್ರಿಕೆಯ ಕಾಪಿಯೂ ಸಹ ಹರಿದಾಡಿದೆ.
ಯಾದಗಿರಿ : ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ಕನ್ನಡ ಪತ್ರಿಕೆ ಲೀಕ್ ಆದ ಬಗ್ಗೆ ವಾಟ್ಸಾಪಲ್ಲಿ ಸಂದೇಶ ಹರಿದಾಡುತ್ತಿದ್ದು, ಅದರಲ್ಲಿ ಪ್ರಶ್ನೆಪತ್ರಿಕೆಯ ಕಾಪಿಯೂ ಸಹ ಹರಿದಾಡಿದೆ.
ಪ್ರಶ್ನೆ ಪ್ರತಿಕೆ ನೋಡಿ ಆತಂಕದಲ್ಲಿಯೇ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ತೆರಳಿದ್ದು, ಬಳಿಕ ಪರಿಶೀಲಿಸಿದಾಗ ವಾಟ್ಸಾಪ್ ಪ್ರಶ್ನೆ ಪತ್ರಿಕೆಗೂ ಪರೀಕ್ಷಾ ಕೇಂದ್ರದಲ್ಲಿ ನೀಡಿದ ಪ್ರಶ್ನೆ ಪತ್ರಿಕೆಗೂ ಸಂಬಂಧವೇ ಇಲ್ಲದಿರುವುದು ತಿಳಿದು ಬಂದಿದೆ.
ಹಲವರಿಗೆ ದ್ವೀತಿಯ ಪಿಯು ಕನ್ನಡ ಪ್ರತಿಕೆಯೆಂದು ಮಾರಾಟ ಮಾಡಿರುವ ಶಂಕೆ ಎದುರಾಗಿದ್ದು, ಇದೊಂದು ರೂಮರ್ಸ್ ಎಂದು ಈ ಬಗ್ಗೆ ಸುವರ್ಣ ನ್ಯೂಸ್ ಗೆ ಯಾದಗಿರಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸ್ಪಷ್ಟನೆ ನೀಡಿದ್ದಾರೆ.
ಇಂತಹ ಕೃತ್ಯ ಎಸಗಿದವರ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದ್ದಾರೆ.