ಪಾಕಿಸ್ತಾನದಲ್ಲಿ ಬೇಹುಗಾ ರಿಕೆಯ ಆರೋಪದಲ್ಲಿ ಬಂಧಿತನಾಗಿ ಮರಣ ದಂಡನೆಗೆ ಗುರಿಯಾದ ಭಾರತೀಯ ಪ್ರಜೆ ಕುಲಭೂಷಣ್‌ ಜಾಧವ್‌ ತಪ್ಪೊಪ್ಪಿ ಕೊಂಡಿದ್ದು, ಮರಣದಂಡನೆ ಯಿಂದ ಕ್ಷಮಾದಾನ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾದ ವಿಡಿಯೋ ಬಿಡುಗಡೆಯಾಗಿದೆ.
ಇಸ್ಲಾಮಾಬಾದ್(ಜೂ.23): ಪಾಕಿಸ್ತಾನದಲ್ಲಿ ಬೇಹುಗಾರಿಕೆಯ ಆರೋಪದಲ್ಲಿ ಬಂಧಿತನಾಗಿ ಮರಣ ದಂಡನೆಗೆ ಗುರಿಯಾದ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ತಪ್ಪೊಪ್ಪಿ ಕೊಂಡಿದ್ದು, ಮರಣದಂಡನೆ ಯಿಂದ ಕ್ಷಮಾದಾನ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾದ ವಿಡಿಯೋ ಬಿಡುಗಡೆಯಾಗಿದೆ.
ಆದರೆ, ವಿಡಿಯೋ ಬಿಡುಗಡೆ ಮಾಡಿದ ಪಾಕಿ ಸ್ತಾನ ವಿರುದ್ಧ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ‘ಕೃತಕವಾಗಿ ತಯಾರಿಸಿದ ಸತ್ಯಗಳು' ಎಂದಿಗೂ ವಾಸ್ತವವಾಗಲು ಸಾಧ್ಯವಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ
ಚೀನಾ-ಪಾಕ್ ಆರ್ಥಿಕ ಕಾರಿ ಡಾರ್ಗೆ ಸಂಬಂಧಿಸಿದ ಆರ್ಥಿಕ ಚಟುವಟಿಕೆಗಳನ್ನು ಹಾಳುಗೆಡಹುವ ಉದ್ದೇಶದಿಂದ ಪಾಕಿಸ್ತಾನದಲ್ಲಿ ಭಾರತದ ಗುಪ್ತಚರ ಸಂಸ್ಥೆ ‘ರಾ' ವಿವಿಧ ಭಯೋತ್ಪಾದನಾ ಚಟುವಟಿಕೆ ಪ್ರಾಯೋಜಿಸಿದೆ ಮತ್ತು ಬಲೂಚಿಸ್ತಾನ ಹಾಗೂ ಕರಾಚಿಯಲ್ಲಿ ಬಂಡಾಯವನ್ನು ತೀವ್ರಗೊಳಿಸಿದೆ ಎಂಬುದನ್ನು ಜಾಧವ್ ಒಪ್ಪಿಕೊಂಡಿರುವುದು ವೀಡಿಯೊದಲ್ಲಿದೆ ಎನ್ನಲಾಗಿದೆ.
