ಸಿಕ್ಕಿಂ ಬಳಿಯ ಡೋಕ್ಲಾಮ್ ಪ್ರದೇಶದ ಒಡೆತನಕ್ಕಾಗಿ ಭಾರತ ಮತ್ತು ಚೀನಾ ಸೈನಿಕರ ನಡುವೆ ‘ಸಂಘರ್ಷ’ ನಡೆಯತ್ತಿರುವಾಗಲೇ, ಇತ್ತ ಲಡಾಖ್‌ನಲ್ಲೂ ಭಾರತೀಯ ಹಾಗೂ ಚೀನೀ ಪಡೆಗಳು ಸಣ್ಣ ಪ್ರಮಾಣದಲ್ಲಿ ಕಾದಾಡಿಕೊಂಡಿವೆ.
ಲಡಾಖ್(ಆ.16): ಸಿಕ್ಕಿಂ ಬಳಿಯ ಡೋಕ್ಲಾಮ್ ಪ್ರದೇಶದ ಒಡೆತನಕ್ಕಾಗಿ ಭಾರತ ಮತ್ತು ಚೀನಾ ಸೈನಿಕರ ನಡುವೆ ‘ಸಂಘರ್ಷ’ ನಡೆಯತ್ತಿರುವಾಗಲೇ, ಇತ್ತ ಲಡಾಖ್ನಲ್ಲೂ ಭಾರತೀಯ ಹಾಗೂ ಚೀನೀ ಪಡೆಗಳು ಸಣ್ಣ ಪ್ರಮಾಣದಲ್ಲಿ ಕಾದಾಡಿಕೊಂಡಿವೆ.
ಭಾರತದೊಳಗೆ ಪ್ರವೇಶಿಸಲು ಚೀನಾ ಯೋಧರು ಯತ್ನಿಸಿದ್ದು, ಇವರನ್ನು ಹಿಮ್ಮೆಟ್ಟಿಸುವಲ್ಲಿ ‘ಭಾರತದ ಪಡೆಗಳು ಯಶಸ್ವುಯಾಗಿವೆ. ಗಡಿರೇಖೆ (ಎಲ್ಎಸಿ) ದಾಟಿ ಬರಲು ಚೀನಾ ಪಡೆಗಳು ಯತ್ನಿಸಿದವು. ಈ ವೇಳೆ ಉಭಯ ಸೈನಿಕರ ಮಧ್ಯೆ ಕಲ್ಲು ತೂರಾಟವೂ ನಡೆಯಿತು.
30 ನಿಮಿಷಗಳ ಸಂಘರ್ಷದ ಬಳಿಕ ಚೀನೀ ಸೈನಿಕರನ್ನು ಹಿಮ್ಮೆಟ್ಟಿಸುವಲ್ಲಿ ಭಾರತದ ಯೋಧರು ಯಶಸ್ವಿಯಾದರು ಎಂದು ಗೊತ್ತಾಗಿದೆ. ಆದರೆ ಘಟನೆ ವೇಳೆ ಉಭಯ ಪಡೆಗಳ ಯೋಧರು ಗಾಯಗೊಂಡಿದ್ದಾರೆ.
