ಜಿಗ್ನೇಶ್ ಮೇವಾನಿ ಪತ್ರಿಕಾಗೋಷ್ಠಿಯನ್ನು ಬಹಿಷ್ಕರಿಸಿದ ಪತ್ರಕರ್ತರು

First Published 16, Jan 2018, 6:43 PM IST
Scribes boycott Mevani meet after he asks TV channel to leave
Highlights
  • ಚೆನ್ನೈಯಲ್ಲಿ ಗುಜರಾತ್ ದಲಿತ ಮುಖಂಡ ಹಾಗೂ ಶಾಸಕ ಜಿಗ್ನೇಶ್ ಮೇವಾನಿ ಸುದ್ದಿಗೋಷ್ಠಿ
  • ಆಂಗ್ಲ ಸುದ್ದಿವಾಹಿನಿಯೊಂದರ ಪ್ರತಿನಿಧಿಗೆ ಹೊರಹೋಗುವಂತೆ ಮೇವಾನಿ ಸೂಚನೆ

ಚೆನ್ನೈ: ಗುಜರಾತ್ ದಲಿತ ಮುಖಂಡ ಹಾಗೂ ಶಾಸಕ ಜಿಗ್ನೇಶ್ ಮೇವಾನಿ ಅವರ ಸುದ್ದಿಗೋಷ್ಠಿಯನ್ನು ಚೆನ್ನೈನ ಪತ್ರಕರ್ತರು ಬಹಿಷ್ಕರಿಸಿದ ಘಟನೆ ಇಂದು ನಡೆದಿದೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಮೇವಾನಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಲಿದ್ದರು. ಆದರೆ, ಆಂಗ್ಲ ಸುದ್ದಿವಾಹಿನಿಯೊಂದರ ಪ್ರತಿನಿಧಿಗೆ ಹೊರಹೋಗುವಂತೆ ಮೇವಾನಿ ಸೂಚಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಆ ಸುದ್ದಿವಾಹಿನಿಯ ಪ್ರತಿನಿಧಿಯ ಉಪಸ್ಥಿತಿಯಲ್ಲಿ ತಾನು ಮಾತನಾಡುವುದಿಲ್ಲ, ಇದು ನನ್ನ ನೀತಿ, ಎಂದು ಮೇವಾನಿ ಹೇಳಿದ್ದಾರೆ.

ಆದರೆ ಚೆನ್ನೈ ಪತ್ರಕರ್ತರಿಗೆ ಮೇವಾನಿ ಪ್ರತಿಕ್ರಿಯೆ ಇರುಸುಮುರುಸು ಉಂಟುಮಾಡಿದೆ. ‘ನೀವು ಈ ರೀತಿ ಆಗ್ರಹಿಸುವಂತಿಲ್ಲ, ಮಾತನಾಡದೇ ಇರುವುದು ನಿಮಗೆ ಬಿಟ್ಟ ವಿಚಾರ ಎಂದು’ ಪತ್ರಕರ್ತರು ಗೋಷ್ಠಿಯನ್ನು ಬಹಿಷ್ಕರಿಸಿದ್ದಾರೆ.

loader