ಗೋವಾದಲ್ಲಿ ನಡೆಯುತ್ತಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಲಯಾಳಂ ಸಿನಿಮಾ ‘ಎಸ್ ದುರ್ಗಾ’ ಅನ್ನು ಪ್ರದರ್ಶನ ಮಾಡುವಂತೆ ಕೇರಳ ಹೈಕೋರ್ಟ್ ಆದೇಶಿಸಿದೆ.

ಕೊಚ್ಚಿ: ಗೋವಾದಲ್ಲಿ ನಡೆಯುತ್ತಿರುವ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಲಯಾಳಂ ಸಿನಿಮಾ ‘ಎಸ್ ದುರ್ಗಾ’ ಅನ್ನು ಪ್ರದರ್ಶನ ಮಾಡುವಂತೆ ಕೇರಳ ಹೈಕೋರ್ಟ್ ಆದೇಶಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರಿಂದಾಗಿ 13 ತೀರ್ಪುಗಾರರ ಶಿಫಾರಸು ಬದಿಗೊತ್ತಿ ಈ ಸಿನಿಮಾವನ್ನು ಚಿತ್ರೋತ್ಸವದಿಂದ ಹೊರಗಿಟ್ಟಿದ್ದ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ನಿರ್ದೇಶಕ

ಸನಲ್ ಕುಮಾರ್ ಶಶಿಧರನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ, ‘ಎಸ್ ದುರ್ಗಾ’ ಚಿತ್ರವನ್ನು ಚಿತ್ರೋತ್ಸವದಲ್ಲಿ ಪ್ರದರ್ಶನ ಮಾಡಬೇಕು ಎಂದು ಹೇಳಿದರು.

ಸೋಮವಾರದಿಂದ ಆರಂಭವಾಗಿರುವ ಚಿತ್ರೋತ್ಸವದಲ್ಲಿ ‘ಎಸ್ ದುರ್ಗಾ’ ಹಾಗೂ ಮರಾಠಿ ಸಿನಿಮಾ ‘ನ್ಯೂಡ್’ಗಳನ್ನು ಕೇಂದ್ರ ಸರ್ಕಾರ ಹೊರಗಿಟ್ಟಿತ್ತು.