ಭೂಮಿಯ ಮೇಲಿನ ಜೀವ ಜನಕವಾಗಿರುವ ಆಮ್ಲಜನಕದ ಪ್ರಮಾಣ ಕಳೆದ 8 ಲಕ್ಷ ವರ್ಷಗಳಿಂದ ಕಡಿಮೆಯಾಗಿದ್ದು, ಕಾರ್ಖಾನೆಗಳಲ್ಲಿ ದಹಿಸಲ್ಪಡುತ್ತಿರುವ ಪಳೆಯುಳಿಕೆ ವಸ್ತುಗಳಿಂದಾಗಿ ಒಂದು ಶತಮಾನದಲ್ಲಿ ಆಮ್ಲಜನಕದ ಪ್ರಮಾಣ ತೀವ್ರವಾಗಿ ಕ್ಷೀಣಿಸಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಕಳೆದ 30 ವರ್ಷಗಳ ದಾಖಲೆಗಳನ್ನು ಪರಾಮರ್ಶಿಸಿದ ಅಮೆರಿಕದ ಪ್ರಿನ್ಸ್‌ಟನ್ ವಿವಿಯ ಸಂಶೋಧಕರು ಭೂಮಿ ಮೇಲೆ ಶೇ. 0.7ರಷ್ಟು ಆಮ್ಲಜನಕ ಕ್ಷೀಣಿಸಿರುವುದನ್ನು ಕಂಡುಕೊಂಡಿದ್ದಾರೆ. ಆದರೆ, ಕಾರ್ಖಾನೆಗಳಿಂದ ಬಿಡುಗಡೆಯಾದ ಇಂಗಾಲದ ಡೈ ಆಕ್ಸೈಡ್‌ನಿಂದಾಗಿ ಕಳೆದ 10 ವರ್ಷಗಳಲ್ಲಿ ಆಮ್ಲಜನಕದ ಪ್ರಮಾಣ ಶೇ.0.1ರಷ್ಟು ಕಡಿಮೆಯಾಗಿರುವುದಕ್ಕೆ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಇದು ಭೂಮಿಗೆ ಅಪಾಯವಾಗುವ ಸಂಭವವಿದೆ ಎಂದಿದ್ದಾರೆ.
ಭೂಮಿ ಮೇಲೆ ಕ್ಷೀಣಿಸುತ್ತಿದೆ ಆಮ್ಲಜನಕ : ಮುಂದಿವೆ ಕಂಟಕ ದಿನಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
Latest Videos
