ಹೈದಾರಾಬಾದ್‌[ಫೆ.20]  ಒಂಬತ್ತನೇ ತರಗತಿ ವಿದ್ಯಾರ್ಥಿನಿಯರಿಬ್ಬರು ತರಗತಿ ನಡೆಯುತ್ತಿರುವಾಗಲೇ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದಿದ್ದಾರೆ. ಆಂಧ್ರಪ್ರದೇಶದ ಸರಕಾರಿ ಶಾಲೆಯೊಂದರ ಹೆಣ್ಣುಮಕ್ಕಳು ಕ್ಲಾಸ್ ರೂಮಿನಲ್ಲೇ ಅಮಲು ಏರಿಸಲು ಹೊರಟವರು.

ತಂಪು ಪಾನೀಯದ ಬಾಟಲಿಯಲ್ಲಿ ಲಿಕ್ಕರ್‌ ಬೆರಿಸಿ ತಂದಿದ್ದ ವಿದ್ಯಾರ್ಥಿನಿಯರು, ಶಿಕ್ಷಕರು ಪಾಠ ಮಾಡುತ್ತಿರುವ ನಡುವೆಯೇ ಗುಟುಕರಿಸಿದ್ದರು. ನಿಧಾನವಾಗಿ ಆ ವಿದ್ಯಾರ್ಥಿನಿಯರು ಕುಳಿತಲ್ಲಿಯೇ ಓಲಾಡುತ್ತ ಮನಸಿಗೆ ಬಂದಂತೆ ಮಾತನಾಡಲು ಆರಂಭಿಸಿದ್ದಾರೆ. ಅನುಮಾನಗೊಂಡ ಶಿಕ್ಷಕರು ಹುಡುಗೀಯರ ಬಳಿ ಇದ್ದ ಬಾಟಲ್ ಪರೀಕ್ಷೆ ಮಾಡಿದಾಗ ಮದ್ಯ ಮಿಕ್ಸ್ ಮಾಡಿ ತಂದಿದ್ದು ಗೊತ್ತಾಗಿದೆ.

ಎಣ್ಣೆ ಬೇಕು ಅಣ್ಣ,, ದೆಹಲಿಯಲ್ಲಿ ಸಾಹಿತಿಗಳ ಗುಂಡು ಪಾರ್ಟಿ

ವಿದ್ಯಾರ್ಥಿನಿಯರಿಬ್ಬರನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದೆ. ವಿದ್ಯಾರ್ಥಿನಿಯರು ಹೇಳುವ ಪ್ರಕಾರ ನಮ್ಮ ತಂದೆ ನಿತ್ಯ ಕುಡಿದು ಮನೆಗೆ ಬರುತ್ತಿದ್ದರು. ಉಳಿಕೆ ಮದ್ಯದ ಬಾಟಲುಗಳನ್ನು ಮನೆಯಲ್ಲಿ ಇರಿಸುತ್ತಿದ್ದರು. ಯಾರೂ ಇಲ್ಲದಾಗ ಅದರ ರುಚಿ ನೋಡಿ ತೆಗೆದುಕೊಂಡು ಬಂದೆವು ಎಂದಿದ್ದಾರೆ.