, ಹಿಂದೂ ಎನ್ನುವುದು ಧರ್ಮವಲ್ಲ, ಅದು ಜೀವನಶೈಲಿ ಮತ್ತು ಒಂದು ಮನಸ್ಥಿತಿಯಾಗಿದೆ,’’ ಎಂದು ಹೇಳಿತ್ತು. ಹೀಗಾಗಿ, ಇದೇ ವಿಚಾರಕ್ಕೆ ಸಂಬಂಸಿದ 3 ಅರ್ಜಿಗಳು ಇತ್ಯರ್ಥವಾಗದೇ ಉಳಿದಿದ್ದವು. ಜೋಷಿ ಅವರು ತಮ್ಮ ಚುನಾವಣಾ ಭಾಷಣದಲ್ಲಿ, ‘‘ಮಹಾರಾಷ್ಟ್ರದಲ್ಲಿ ಮೊದಲ ಹಿಂದೂ ರಾಜ್ಯ ನಿರ್ಮಾಣ ಮಾಡುತ್ತೇವೆ,’
ನವದೆಹಲಿ(ಅ.18):ಹಿಂದೂ ಎನ್ನುವುದು ಧರ್ಮವೋ, ಜೀವನಕ್ರಮವೋ? ಈ ವಿಚಾರಕ್ಕೆ ಸಂಬಂಸಿ 1995ರಲ್ಲಿ ತಾನೇ ನೀಡಿದ್ದ ತೀರ್ಪಿನ ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ಮುಂದಾಗಿದೆ. 20 ವರ್ಷಗಳ ನಂತರ ಏಳು ಮಂದಿ ನ್ಯಾಯೀಶರನ್ನೊಳಗೊಂಡ ಸಂವಿಧಾನ ಪೀಠವು, ಈ ಕುರಿತ ವಿಚಾರಣೆಯನ್ನು ಮಂಗಳವಾರ ಆರಂಭಿಸಿದೆ.
ರಾಜಕೀಯ ಲಾಭಕ್ಕಾಗಿ ಧರ್ಮವನ್ನು ದುರ್ಬಳಕೆ ಮಾಡುವುದು ‘ಭ್ರಷ್ಟ ಪರಿಪಾಠ’ ಎಂಬ 1951ರ ಪ್ರಜಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123ರ ವ್ಯಾಖ್ಯಾನವನ್ನು ಪರಿಶೀಲಿಸಲು ಸಿಜೆಐ ಟಿ ಎಸ್ ಠಾಕೂರ್ ನೇತೃತ್ವದ ನ್ಯಾಯಪೀಠ ಒಪ್ಪಿದೆ. ವಿಶೇಷವೆಂದರೆ, ವಿಚಾರಣೆಯಲ್ಲಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರ ಸಲಹೆಯನ್ನು ಪಡೆದುಕೊಳ್ಳುವಂತೆ ನ್ಯಾಯವಾದಿಯೊಬ್ಬರು ನೀಡಿದ ಸಲಹೆಯನ್ನು ನ್ಯಾಯಪೀಠ ತಿರಸ್ಕರಿಸಿದೆ.
‘‘ಶಾಸನದ ವ್ಯಾಖ್ಯಾನಕ್ಕೆ ಸಂಬಂಸಿದ ಪ್ರತಿಯೊಂದು ಪ್ರಕರಣದಲ್ಲೂ ಅಟಾರ್ನಿ ಜನರಲ್ ಅವರ ಸಹಾಯ ಅತ್ಯಗತ್ಯ ಎಂಬುದು ನಿಮ್ಮ ಅನಿಸಿಕೆಯೇ,’’ ಎಂದು ಪ್ರಶ್ನಿಸಿದ ಪೀಠ, ಅಟಾರ್ನಿ ಜನರಲ್ ಸಲಹೆ ಪಡೆಯಲು ನಿರಾಕರಿಸಿದೆ. ಸಿಜೆಐ ಠಾಕೂರ್ ಮಾತ್ರವಲ್ಲದೆ, ನ್ಯಾಯಮೂರ್ತಿಗಳಾದ ಮದನ್ ಬಿ ಲೋಕುರ್, ಎಸ್ ಎ ಬೋಬ್ಡೆ, ಎ ಕೆ ಗೋಯಲ್, ಯು ಯು ಲಲಿತ್, ಡಿ ವೈ ಚಂದ್ರಚೂಡ್ ಮತ್ತು ಎಲ್ ನಾಗೇಶ್ವರ ರಾವ್ ಅವರೂ ಈ ಸಂವಿಧಾನ ಪೀಠದಲ್ಲಿದ್ದಾರೆ.
ಏನಿದು ಪ್ರಕರಣ?
ಮನೋಹರ್ ಜೋಷಿ ಮತ್ತು ಎನ್ ಬಿ ಪಾಟೀಲ್ ಪ್ರಕರಣಕ್ಕೆ ಸಂಬಂಧಿಸಿ 1995ರಲ್ಲಿ ತೀರ್ಪು ನೀಡಿದ್ದ ನ್ಯಾ.ಜೆ ಎಸ್ ವರ್ಮಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ, ‘‘ಹಿಂದುತ್ವ/ಹಿಂದೂಧರ್ಮದ ಹೆಸರಲ್ಲಿ ಮತ ಯಾಚಿಸುವುದರಿಂದ ಅದು ಯಾವುದೇ ಅಭ್ಯರ್ಥಿಯ ಮೇಲೆ ಪ್ರತಿಕೂಲ ಪರಿಣಾಮ ಬೀರದು. ಏಕೆಂದರೆ, ಹಿಂದೂ ಎನ್ನುವುದು ಧರ್ಮವಲ್ಲ, ಅದು ಜೀವನಶೈಲಿ ಮತ್ತು ಒಂದು ಮನಸ್ಥಿತಿಯಾಗಿದೆ,’’ ಎಂದು ಹೇಳಿತ್ತು. ಹೀಗಾಗಿ, ಇದೇ ವಿಚಾರಕ್ಕೆ ಸಂಬಂಸಿದ 3 ಅರ್ಜಿಗಳು ಇತ್ಯರ್ಥವಾಗದೇ ಉಳಿದಿದ್ದವು. ಜೋಷಿ ಅವರು ತಮ್ಮ ಚುನಾವಣಾ ಭಾಷಣದಲ್ಲಿ, ‘‘ಮಹಾರಾಷ್ಟ್ರದಲ್ಲಿ ಮೊದಲ ಹಿಂದೂ ರಾಜ್ಯ ನಿರ್ಮಾಣ ಮಾಡುತ್ತೇವೆ,’’ ಎಂದು ಹೇಳಿದ್ದರು. ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದ ಪಾಟೀಲ್, ‘‘ಜೋಷಿ ಅವರು ಧರ್ಮದ ಹೆಸರಲ್ಲಿ ಮತ ಪಡೆಯುತ್ತಿದ್ದಾರೆ. ಇದನ್ನು ಕೂಡ ಪ್ರಜಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123ರ ಉಪ ಕಲಂ 3ರಲ್ಲಿ ಉಲ್ಲೇಖಿಸಲಾದ ಭ್ರಷ್ಟ ಚಟುವಟಿಕೆಯ ವ್ಯಾಪ್ತಿಗೆ ತರಬೇಕು,’’ ಎಂದು ಕೋರಿದ್ದರು.
