ಹೊರಬೀಳಲಿದೆ ಕಾವೇರಿ ತೀರ್ಪು : ಇಂದು ಕರ್ನಾಟಕದ ಪಾಲಿಗೆ ಐತಿಹಾಸಿಕ ದಿನ

SC to pronounce Cauvery verdict today
Highlights

ಇಂದು ಕರ್ನಾಟಕ ಪಾಲಿಗೆ ಐತಿಹಾಸಿಕ ದಿನವಾಗಲಿದೆ.  ಬೆಳಗ್ಗೆ 10.30ಕ್ಕೆ ಕಾವೇರಿ ಅಂತಿಮ ತೀರ್ಪು ಪ್ರಕಟವಾಗಲಿದೆ.  1890 ರಿಂದ ನಡೆಯುತ್ತಿರುವ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾವೇರಿ ನೀರು ಹಂಚಿಕೆ ಕುರಿತು 10.30 ಕ್ಕೆ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಅಧ್ಯಕ್ಷತೆ ತ್ರಿ ಸದಸ್ಯ ಪೀಠ ಅಂತಿಮ ತೀರ್ಪು ನೀಡಲಿದೆ. 

ಬೆಂಗಳೂರು : ಇಂದು ಕರ್ನಾಟಕ ಪಾಲಿಗೆ ಐತಿಹಾಸಿಕ ದಿನವಾಗಲಿದೆ.  ಬೆಳಗ್ಗೆ 10.30ಕ್ಕೆ ಕಾವೇರಿ ಅಂತಿಮ ತೀರ್ಪು ಪ್ರಕಟವಾಗಲಿದೆ.  1890 ರಿಂದ ನಡೆಯುತ್ತಿರುವ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾವೇರಿ ನೀರು ಹಂಚಿಕೆ ಕುರಿತು 10.30 ಕ್ಕೆ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ಅಧ್ಯಕ್ಷತೆ ತ್ರಿ ಸದಸ್ಯ ಪೀಠ ಅಂತಿಮ ತೀರ್ಪು ನೀಡಲಿದೆ. 

ಕಾವೇರಿ ತೀರ್ಪಿನ ಸಂಬಂಧ ಕರ್ನಾಟಕ ಮನವಿಗಳು ಇಂತಿವೆ.

ಈಗಾಗಲೇ ಕರ್ನಾಟಕದ ಪರ ವಕೀಲರು ಸುಪ್ರೀಂಕೋರ್ಟ್​ಗೆ ಕಾವೇರಿ ನ್ಯಾಯಾಧೀಕರಣ ನೀರು ಹಂಚಿಕೆ ಪಾಲು ಪರಿಷ್ಕರಣೆಯಾಗಬೇಕು.. ಇನ್ನೂ ನ್ಯಾಯಾಧೀಕರಣ ಕರ್ನಾಟಕಕ್ಕೆ ಹಂಚಿಕೆ ಮಾಡಿರುವ 270 ಟಿಎಂಸಿ ನೀರು ಸಾಕಾಗುವುದಿಲ್ಲ.. ಜತೆಗೆ ಕಾವೇರಿ ಕಣಿವೆ ವ್ಯಾಪ್ತಿಗೆ ಪೂರ್ಣ ಬೆಂಗಳೂರು ನಗರ ಸೇರಿಸಬೇಕು. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ನಿರ್ದೇಶನ ಬೇಡವೇ ಬೇಡ ಎಂದು ಮನವಿ ಮಾಡಿದೆ.

ಇನ್ನೂ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ರಾಜ್ಯ ವಿರೋಧಿಸಿದೆ.  ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದ್ರೆ ಕಾವೇರಿ ಮೇಲೆ ರಾಜ್ಯಕ್ಕೆ ಯಾವುದೇ ಅಧಿಕಾರ ಇರಲ್ಲ.  ಜತೆಗೆ ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳು ಕೇಂದ್ರದ ಉಸ್ತುವಾರಿಗೆ ಒಳಪಡಲಿವೆ.. ಇನ್ನೂ ಯಾವ ವೇಳೆಗೆ ಯಾವ ಬೆಳೆ ಬೆಳೆಯಬೇಕು.  ಕೆರೆ, ಕಟ್ಟೆ, ನಾಲೆಗಳಿಗೂ ನೀರು ಕೊಡಲು ಕೇಂದ್ರದ ಅನುಮತಿ ಅತ್ಯಗತ್ಯ. ಹೀಗಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ವಿರೋಧಿಸಿದೆ.

loader