ಕಾವೇರಿ ವಿವಾದದ ವಿಚಾರಣೆಯನ್ನು ಫೆ. 7 ರವರೆಗೆ ಮುಂದುವರೆಸುತ್ತೇವೆಂದು ಸುಪ್ರೀಂಕೋರ್ಟ್ ಇಂದು ಹೇಳಿದೆ.
ನವದೆಹಲಿ (ಜ.04): ಕಾವೇರಿ ವಿವಾದದ ವಿಚಾರಣೆಯನ್ನು ಫೆ. 7 ರವರೆಗೆ ಮುಂದುವರೆಸುತ್ತೇವೆಂದು ಸುಪ್ರೀಂಕೋರ್ಟ್ ಇಂದು ಹೇಳಿದೆ.
ನ್ಯಾ. ದೀಪಕ್ ಮಿಶ್ರಾ, ಅಮಿತವ ರಾಯ್ ಮತ್ತು ಎ.ಎಂ ಖಾನ್ ವಿಲ್ಕಾರ್ ನ್ಯಾಯ ಪೀಠವು ಕಾವೇರಿ ಮಧ್ಯಂತರ ಆದೇಶವನ್ನು ಮುಂದೂಡಿದ್ದು ಅಲ್ಲಿಯವರೆಗೆ ಪ್ರತಿದಿನ ಕರ್ನಾಟಕ ತಮಿಳುನಾಡಿಗೆ 2 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಆದೇಶಿಸಿದೆ.
ತಮಿಳುನಾಡು ಪರ ವಕೀಲ ಶೇಖರ್ ನೇಫಡೆ ಕಾವೇರಿ ವಿವಾದಕ್ಕೆ ಒಂದು ತಾತ್ವಿಕ ಅಂತ್ಯ ನೀಡಿ ಎಂದು ತ್ರಿಸದಸ್ಯ ಪೀಠಕ್ಕೆ ಒತ್ತಾಯಿಸಿದ್ದಾರೆ.
