ಇದು ಬಿಜೆಪಿ ನಿಮಗೆ ಕೊಟ್ಟಿರುವ ಕೆಲಸವೋ? ಕೋರ್ಟ್’ನಲ್ಲಿ ಪಕ್ಷದ ಕೆಲಸಗಳನ್ನು ಮಾಡಲು ಬಿಜೆಪಿ ನಿಮಗೆ ಹಣ ಕೊಡುತ್ತದೋ? ಎಂದು ಸುಪ್ರೀಂ ಕೋರ್ಟ್ ಅರ್ಜಿದಾರನನ್ನು ಕೇಳಿದೆ.

ನವದೆಹಲಿ (ಡಿ.16): ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸುವ ಬಿಜೆಪಿ ವಕ್ತಾರನನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದು ಕೊಂಡ ಘಟನೆ ಇಂದು ನಡೆದಿದೆ.

ನ್ಯಾಯಾಲಯದಲ್ಲಿ ರಾಜಕೀಯ ಚಟುವಟಿಕೆ ನಡೆಸಲು ನಿಮಗೆ ನಿಮ್ಮ ಪಕ್ಷ ಹಣ ನೀಡುತ್ತದೆಯೋ? ಎಂದು ನಾಲ್ಕು ಪಿಐಎಲ್’ಗಳನ್ನು ಸಲ್ಲಿಸಿದ್ದ ದೆಹಲಿಯ ಬಿಜೆಪಿ ವಕ್ತಾರನಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.

ಇದು ಬಿಜೆಪಿ ನಿಮಗೆ ಕೊಟ್ಟಿರುವ ಕೆಲಸವೋ? ಕೋರ್ಟ್’ನಲ್ಲಿ ಪಕ್ಷದ ಕೆಲಸಗಳನ್ನು ಮಾಡಲು ಬಿಜೆಪಿ ನಿಮಗೆ ಹಣ ಕೊಡುತ್ತದೋ? ಎಂದು ಸುಪ್ರೀಂ ಕೋರ್ಟ್ ಅರ್ಜಿದಾರನನ್ನು ಕೇಳಿದೆ.

ನೀವು ವೃತ್ತಿಪರ ಪಿಐಎಲ್ ಕಾರ್ಯಕರ್ತನಾಗಿದ್ದೀರಿ, ಪ್ರತಿ ದಿನ ಪಿಐಎಲ್ ಸಲ್ಲಿಸುತ್ತೀರಿ. ನಿಮ್ಮ ಪಕ್ಷವೇ ಅಧಿಕಾರದಲ್ಲಿದೆ, ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರವನ್ನು ಏಕೆ ಸಂಪರ್ಕಿಸಬಾರದು ಎಂದು ಕೋರ್ಟ್ ಕೇಳಿದೆ.

ನ್ಯಾಯಾಲಯಗಳಲ್ಲಿ ರಾಜಕೀಯ ಚಟುವಟಿಕೆಗಳನ್ನು ನಡೆಸುವುದನ್ನು ಆಕ್ಷೇಪಿಸಿದ ಸುಪ್ರೀಂ ಕೋರ್ಟ್, ರಾಜಕೀಯ ಕಾರ್ಯಕರ್ತ ರಾಜಕೀಯ ಲಾಭಕ್ಕಾಗಿ ನ್ಯಾಯಾಲಯಗಳನ್ನು ಬಳಸುವುದನ್ನು ಪ್ರೋತ್ಸಾಹಿಸಲಾಗದು ಎಂದಿದೆ ಹಾಗೂ ಅರ್ಜಿಯನ್ನು ವಜಾಗೊಳಿಸಿದೆ.