ಪಾರ್ಸಿ ಸಮುದಾಯದಲ್ಲಿರುವ ವಿಚ್ಛೇದನ ಪದ್ಧತಿ ಬಗ್ಗೆ ಸುಪ್ರೀಂ  ದೃಷ್ಟಿ ಹರಿಸಿದೆ. ಈ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ನ್ಯಾಯಾಲಯ, ಕೇಂದ್ರ ಸರ್ಕಾರದ ಕಾನೂನು ಅಧಿಕಾರಿಗಳ ಸಲಹೆ ಕೋರಿದೆ.

ನವದೆಹಲಿ(ನ.25): ಹಠಾತ್ ವಿಚ್ಛೇದನ ನೀಡಲು ಮುಸಲ್ಮಾನರು ಬಳಸುತ್ತಿದ್ದ ತ್ರಿವಳಿ ತಲಾಖ್ (ತಲಾಖ್ ಎ ಬಿದ್ದತ್)ಗೆ ನಿಷೇಧ ಹೇರಿದ ಸುಪ್ರೀಂಕೋರ್ಟ್ ಇದೀಗ ಪಾರ್ಸಿ ಸಮುದಾಯದಲ್ಲಿರುವ ವಿಚ್ಛೇದನ ಪದ್ಧತಿ ಬಗ್ಗೆ ದೃಷ್ಟಿ ಹರಿಸಿದೆ. ಈ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ನ್ಯಾಯಾಲಯ, ಕೇಂದ್ರ ಸರ್ಕಾರದ ಕಾನೂನು ಅಧಿಕಾರಿಗಳ ಸಲಹೆ ಕೋರಿದೆ. ಕೆಲವು ಸದಸ್ಯರನ್ನು ಒಳಗೊಂಡ ನ್ಯಾಯ ಮಂಡಳಿ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವವ್ಯವಸ್ಥೆ 1959ರಲ್ಲೇ ಭಾರತದಲ್ಲಿ ರದ್ದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ದೇಶದ ಪ್ರಭಾವಿ ಪಾರ್ಸಿ ಸಮುದಾಯದಲ್ಲಿ ಈಗಲೂ ಪಂಚ ಸದಸ್ಯ ನ್ಯಾಯಮಂಡಳಿ ಮೂಲಕ ವಿಚ್ಛೇದನಗಳು ಪ್ರಕರಣಗಳು ವಿಚಾರಣೆ ನಡೆಯುತ್ತಿವೆ. ಈ ವಿಚಾರ ತಿಳಿದು ನ್ಯಾ| ಕುರಿಯನ್ ಜೋಸೆಫ್ ನೇತೃತ್ವದ ಪೀಠ ಅಚ್ಚರಿ ವ್ಯಕ್ತಪಡಿಸಿತು. ಇದಕ್ಕೆ ಅರ್ಜಿದಾರೆ, ತ್ರಿವಳಿ ತಲಾಖ್ ಅನ್ನೇ ಸುಪ್ರೀಂ ಸಂವಿಧಾನ ಬಾಹಿರ ಎಂದಿದೆ. ಹೀಗಾಗಿ ಈ ಕಾನೂನನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ಕೋರಿದರು. ನ್ಯಾಯಪೀಠ ಒಪ್ಪಿಗೆ ಸೂಚಿಸಿತು.