ವ್ಯಭಿಚಾರ ಹೆಣ್ಣಿಗೆ ಅಪ್ಲೈ ಆಗಲ್ವಾ?: ಸುಪ್ರೀಂ ಹೇಳೊದೇನು?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Aug 2018, 12:03 PM IST
SC says adultery law is anti-women
Highlights

ಮಹಿಳೆ ಗಂಡಿನ ಸ್ವತ್ತಲ್ಲ ಎಂದ ಸುಪ್ರೀಂ! ವ್ಯಭಿಚಾರಕ್ಕೆ ಶಿಕ್ಷೆ ಅಸಂವಿಧಾನಿಕ! ವ್ಯಭಿಚಾರಕ್ಕೆ ಶಿಕ್ಷೆಗೆ ಕಾನೂನಿನ ಅಗತ್ಯ ಇಲ್ಲ!  ಹೆಣ್ಣಿನ ಮೇಲೆ ಗಂಡಿನ ದಬ್ಬಾಳಿಕೆ ಸಲ್ಲ! ಲೈಂಗಿಕ ಸ್ವಾಯತ್ತತೆ ಹೆಣ್ಣಿಗೂ ಇದೆ

ನವದೆಹಲಿ(ಆ.3): ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಕಾಯ್ದೆ ಅಸಂವಿಧಾನಿಕ ಮತ್ತು ಸಮಾನತೆ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಮಹಿಳೆ ಗಂಡಿನ ಸ್ವತ್ತು ಅಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್, ವೈವಾಹಿಕ ಬಂಧನದ ಪಾವಿತ್ರ್ಯತೆ ಕಾಪಾಡಲು ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಕಾನೂನು ಅಗತ್ಯ ಎಂಬ ಕೇಂದ್ರ ಸರ್ಕಾರದ ವಾದವನ್ನು ತಳ್ಳಿ ಹಾಕಿದೆ.

ಕೇಂದ್ರ ಸರ್ಕಾರದ ವಾದವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ. ಇದು ಹೆಣ್ಣಿನ ಮೇಲೆ ಗಂಡಿನ ದಬ್ಬಾಳಿಕೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅಭಿಪ್ರಾಯಪಟ್ಟಿದೆ.

ವಿವಾಹಿತ ಪುರುಷನೊಬ್ಬ ಅವಿವಾಹಿತ ಮಹಿಳೆಯ ಜೊತೆ ಲೈಂಗಿಕ ಸಂಬಂಧ ಹೊಂದಿದರೆ ಅದರಲ್ಲಿ ಅಪರಾಧವೇನೂ ಇಲ್ಲ. ಆದರೆ ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ನಿಯಮ ಗಂಡು ಮತ್ತು ಹೆಣ್ಣನ್ನು ತಾರತಮ್ಯದಿಂದ ನೋಡುತ್ತದೆ ಎಂದು ಪೀಠ ಹೇಳಿದೆ.

ಕೇಂದ್ರದ ನಿಲುವು ಸಮಾನತೆಯ ಹಕ್ಕಿನ ಉಲ್ಲಂಘನೆ ಎಂದಿರುವ ಸುಪ್ರೀಂ, ಬೇರೆ ವ್ಯಕ್ತಿಯ ಜೊತೆಗೆ ಪತ್ನಿಯ ಲೈಂಗಿಕ ಸಂಬಂಧದ ಸ್ವರೂಪ ಏನು ಎಂಬುದು ಆಕೆಯ ಪತಿ ಅದಕ್ಕೆ ಒಪ್ಪಿಗೆ ಕೊಟ್ಟಿದ್ದಾನೋ ಅಥವಾ ಇಲ್ಲವೋ ಎಂಬುದನ್ನು ಅವಲಂಬಿಸಿದೆ. ಹೀಗಾಗಿ ಈ ಸೆಕ್ಷನ್ ಮಹಿಳೆಯನ್ನು ಗಂಡಿನ ಸೊತ್ತು ಎಂದು ಪರಿಗಣಿಸುತ್ತದೆ ಎಂದು ಹೇಳಿದೆ.

ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಐಪಿಸಿ ಸೆಕ್ಷನ್ 497 ಪ್ರಶ್ನಿಸಿ ಜೋಸೆಫ್ ಸೈನ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ, ವಿವಾಹೇತರ ಸಂಬಂಧವೇ ಮದುವೆ ಮುರಿದು ಬಿದ್ದಿದೆ ಎಂಬುದರ ಸೂಚನೆಯಾಗಿದ್ದು, ಮಹಿಳೆಗೆ ಲೈಂಗಿಕ ಸಂಪರ್ಕ ಬೇಡ ಎನ್ನುವುದರ ಜೊತೆಗೆ ಲೈಂಗಿಕ ಸ್ವಾಯತ್ತತೆಯೂ ಇದೆ ಎಂದು ಪೀಠ ಹೇಳಿದೆ. ಮದುವೆಯ ಕಾರಣಕ್ಕೆ ಮಹಿಳೆಯ ಲೈಂಗಿಕ ಹಕ್ಕನ್ನು ಮೊಟಕುಗೊಳಿಸಬಾರದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

loader