20 ಸಾವಿರ ಜನಸಂಖ್ಯೆಯಿರುವ ಪ್ರದೇಶದಲ್ಲಿ ಈ ಹಿಂದೆ ಆದೇಶಿಸಿದ್ದ 500 ಮೀ. ವ್ಯಾಪ್ತಿಯನ್ನು ಕಡಿಮೆಗೊಳಿಸಿ 220 ಮೀ.ಗಳಿಗೆ ನಿಗದಿಪಡಿಸಲು ಸುಪ್ರೀಂ ಕೋರ್ಟ್ ಒಪ್ಪಿದೆ.
ನವದೆಹಲಿ (ಮಾ.31): ರಾಷ್ಟ್ರೀಯ ಹೆದ್ದಾರಿಗಳ 500 ಮೀ. ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳಿಗೆ ನಿಷೇಧ ಹೇರಿರುವ ತನ್ನ ಹಿಂದಿನ ತೀರ್ಪನ್ನು ಸಡಿಲಿಸಲು ಇಂದು ಸುಪ್ರಿಂ ಕೋರ್ಟ್ ಒಪ್ಪಿಕೊಂಡಿದೆ.
20 ಸಾವಿರ ಜನಸಂಖ್ಯೆಯಿರುವ ಪ್ರದೇಶದಲ್ಲಿ ಈ ಹಿಂದೆ ಆದೇಶಿಸಿದ್ದ 500 ಮೀ. ವ್ಯಾಪ್ತಿಯನ್ನು ಕಡಿಮೆಗೊಳಿಸಿ 220 ಮೀ.ಗಳಿಗೆ ನಿಗದಿಪಡಿಸಲು ಸುಪ್ರೀಂ ಕೋರ್ಟ್ ಒಪ್ಪಿದೆ.
ಆದರೆ ಉಳಿದ ಪ್ರದೇಶಗಳಲ್ಲಿ ಕಳೆದ ಡಿ.15ರಂದು ನೀಡಿದ ಆದೇಶ ಅನ್ವಯವಾಗಲಿದೆಯೆಂದು ಸುಪ್ರೀಂ ಪುನಾರವರ್ತಿಸಿದೆ.