Asianet Suvarna News Asianet Suvarna News

ಹಿಂದೂ ಪ್ರಾರ್ಥನೆ ಪ್ರಶ್ನಿಸಿ ಕೇಂದ್ರಕ್ಕೆ ಸುಪ್ರೀಂ ನೋಟಿಸ್

ದೇಶದ 1100ಕ್ಕೂ ಕೇಂದ್ರೀಯ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಂದ  ಬೆಳಗಿನ ಸಮಯ ಒಂದು ಧರ್ಮದ ಪ್ರಾರ್ಥನೆ ಅದರಲ್ಲೂ ಮುಖ್ಯವಾಗಿ ಹಿಂದಿಯಲ್ಲಿ ಹಾಡಿಸಲಾಗುತ್ತದೆ. ಈ ರೀತಿ ಹಾಡುವುದು ಸಂವಿಧಾನದ ಉಲ್ಲಂಘನೆಯಾಗಿದೆ' ಎಂದು ಕೋರ್ಟ್ ತಿಳಿಸಿದೆ.

SC Issues Notice to Centre on PIL Challenging Hindu Prayer in Kendriya Vidyalayas

ನವದೆಹಲಿ(ಜ.10): ಸರ್ಕಾರದಿಂದ ನಡೆಯುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಂದಿ ಪ್ರಾರ್ಥನೆ ಹಾಡುವುದನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಮಧ್ಯಪ್ರದೇಶದ ಜಬಲಾ'ಪುರದ ವ್ಯಕ್ತಿಯೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು(ಪಿಐಎಲ್) ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್, ದೇಶದ 1100ಕ್ಕೂ ಕೇಂದ್ರೀಯ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಂದ  ಬೆಳಗಿನ ಸಮಯ ಒಂದು ಧರ್ಮದ ಪ್ರಾರ್ಥನೆ ಅದರಲ್ಲೂ ಮುಖ್ಯವಾಗಿ ಹಿಂದಿಯಲ್ಲಿ ಹಾಡಿಸಲಾಗುತ್ತದೆ. ಈ ರೀತಿ ಹಾಡುವುದು ಸಂವಿಧಾನದ ಉಲ್ಲಂಘನೆಯಾಗಿದೆ' ಎಂದು ಕೋರ್ಟ್ ತಿಳಿಸಿದೆ.

ಸರ್ಕಾರದ ವತಿಯಿಂದ ನಡೆಯುವ ಶಾಲೆಗಳಲ್ಲಿ 'ಅಸ್ತೋ ಮಾ ಸದ್ಗಮಯ' ರೀತಿಯ ಒಂದು ಧರ್ಮದ ಶ್ಲೋಕಗಳನ್ನು ಹಾಡಿಸುವುದು' ಸಂವಿಧಾನದ ವಿರೋಧಿ ನಡೆಯಾಗುತ್ತದೆ. ಹಿಂದಿ ಶ್ಲೋಕಗಳನ್ನು 1962ರಿಂದಲೂ ಕೇಂದ್ರೀಯ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಂದ ಹೇಳಿಸಲಾಗುತ್ತಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಇತರ ಧರ್ಮದವರು ಶಿಕ್ಷಣ ಪಡೆಯುತ್ತಿರುವ ಕಾರಣ' ಹಿಂದೂ ಧರ್ಮದ ಪ್ರಾರ್ಥನೆಗಳು' ಬಲವಂತದಿಂದ ಹೇಳಿಸಿದಂತಾಗುತ್ತದೆ' ಎಂದು ಕೋರ್ಟ್ ಹೇಳಿದೆ.

Follow Us:
Download App:
  • android
  • ios