ಸುಪ್ರೀಂಕೋರ್ಟ್ ನಲ್ಲೊಂದು ಹೊಸ ದಾಖಲೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 5, Aug 2018, 12:34 PM IST
SC has three women judges for the first time
Highlights

ಸುಪ್ರೀಂಕೋರ್ಟ್ ನಲ್ಲಿ ಇದೀಗ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ.  ಮೊದಲ ಬಾರಿಗೆ ಮೂವರು ಮಹಿಳಾ ನ್ಯಾಯಮೂರ್ತಿಗಳ ನೇಮಕ ಮಾಡಲಾಗಿದೆ. 

ನವದೆಹಲಿ: ಕೆಲವೊಂದು ತಿಕ್ಕಾಟದ ನಡುವೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮ ಕಾತಿ ನಡೆದಿದ್ದರೂ, ನೇಮಕಾತಿಯಲ್ಲೊಂದು ಹೊಸ ದಾಖಲೆ ಸೃಷ್ಟಿಯಾಗಿದೆ. ಇದೇ ಮೊದಲ ಬಾರಿ ಸುಪ್ರೀಂ ಕೋರ್ಟ್‌ನಲ್ಲಿ ಏಕಕಾಲದಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿ ಗಳಿರುವುದು ಹೊಸ ದಾಖಲೆ. 

ಮದ್ರಾಸ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿದ್ದ ನ್ಯಾ.ಇಂದಿರಾ ಬ್ಯಾನರ್ಜಿ(60) ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದು, ಮಹಿಳಾ ನ್ಯಾಯಾಧೀಶರ ಸಂಖ್ಯೆ 3 ಕ್ಕೇರಿದೆ. ಈಗಾಗಲೇ ನ್ಯಾ.ಆರ್. ಭಾನುಮತಿ ಮತ್ತು ನ್ಯಾ. ಇಂದೂ ಮಲ್ಹೋತ್ರಾ ಸುಪ್ರೀಂನಲ್ಲಿದ್ದಾರೆ.

loader