Asianet Suvarna News Asianet Suvarna News

ಅನಿವಾಸಿ ಭಾರತೀಯರಿಗೆ ಮತದಾನ: ವಾರದಲ್ಲಿ ನಿರ್ಧರಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ಕೇಂದ್ರ ಸರ್ಕಾರವು ಎನ್'ಆರ್'ಐಗಳಿಗೆ ಮತ ಚಲಾಯಿಸುವಂತೆ ಕಾನೂನು ರೂಪಿಸಲಿದೆಯೆ ಅಥವಾ ನಿಯಮಗಳನ್ನು ತಿದ್ದುಪಡಿ ಮಾಡಲಿದೆಯೇ ಎಂದು ವಿವರಣೆ ಕೇಳಿದೆ. ಈ ತಿಂಗಳ ಆರಂಭದಲ್ಲಿ ಚುನಾವಣಾ ಆಯೋಗವು 3 ತಿಂಗಳೊಳಗೆ ಕಾನೂನು ರಚಿಸದಿದ್ದರೆ ಮತದಾನದ ಹಕ್ಕನ್ನು ಪರಿಚಯಿಸುವ ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳುವುದಾಗಿ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು.

SC gives one week to Centre to decide on giving voting rights to NRIs
  • Facebook
  • Twitter
  • Whatsapp

ನವದೆಹಲಿ(ಜು.14): ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕನ್ನು ನೀಡುವ ಸಂಬಂಧ ಒಂದು ವಾರದಲ್ಲಿ ನಿರ್ಧರಿಸಿ ಎಂದು ಕೇಂದ್ರಕ್ಕೆ ಸೂಚನೆ ನೀಡಿದೆ.

ಕೇಂದ್ರ ಸರ್ಕಾರವು ಎನ್'ಆರ್'ಐಗಳಿಗೆ ಮತ ಚಲಾಯಿಸುವಂತೆ ಕಾನೂನು ರೂಪಿಸಲಿದೆಯೆ ಅಥವಾ ನಿಯಮಗಳನ್ನು ತಿದ್ದುಪಡಿ ಮಾಡಲಿದೆಯೇ ಎಂದು ವಿವರಣೆ ಕೇಳಿದೆ. ಈ ತಿಂಗಳ ಆರಂಭದಲ್ಲಿ ಚುನಾವಣಾ ಆಯೋಗವು 3 ತಿಂಗಳೊಳಗೆ ಕಾನೂನು ರಚಿಸದಿದ್ದರೆ ಮತದಾನದ ಹಕ್ಕನ್ನು ಪರಿಚಯಿಸುವ ಪ್ರಕ್ರಿಯೆಯನ್ನು ಹಿಂತೆಗೆದುಕೊಳ್ಳುವುದಾಗಿ ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು.

ವಿಶ್ವದಾದ್ಯಂತ 1 ಕೋಟಿಗೂ ಹೆಚ್ಚು ಅನಿವಾಸಿ ಭಾರತೀಯರಿದ್ದು, ಈಗಾಗಲೇ 24,348 ಮಂದಿ ಚುನಾವಣೆಯಲ್ಲಿ ಅವಕಾಶ ನೀಡಿದರೆ ಬ್ಯಾಲೆಟ್ ಪತ್ರದಲ್ಲಿ ಮತ ಚಲಾಯಿಸಿ ಅಂಚೆ ಮೂಲಕ ಕಳಿಸುವ ಕೊಡುವ ಪ್ರಕ್ರಿಯೆಗೆ  ಚುನಾವಣಾ ಆಯೋಗದಲ್ಲಿ ನೋಂದಾಯಿಸಿದ್ದಾರೆ.

ಈ ರೀತಿಯ ಕಾನೂನು ಜಾರಿಗೆ ಬಂದರೆ ಕೇರಳ, ಪಂಜಾಬ್ ಹಾಗೂ ತೆಲಂಗಾಣ ರಾಜ್ಯದ ಅನಿವಾಸಿ ಭಾರತೀಯರು ಹೆಚ್ಚಾಗಿದ್ದು, ಅವರು ಮತದಾನ ಮಾಡುವ ಅವಕಾಶ ಲಭ್ಯವಾಗಲಿದೆ.

Follow Us:
Download App:
  • android
  • ios