ನಕಲಿ ದಾಖಲೆಗಳನ್ನು ನೀಡಿ ಸಿಮ್ ಕಾರ್ಡ್ ಪಡೆಯುವ ಹಾಗೂ ಅವುಗಳನ್ನು ಅಪರಾಧ ಚಟುವಟಿಕೆಗಳಿಗೆ ದುರ್ಬಳಕೆ ಮಾಡುವ ಪೃವೃತಿಗೆ ಕಡಿವಾಣ ಹಾಕಲು ಸಮರ್ಪಕವಾದ ಪರಿಶೀಲನೆ ಮುಖ್ಯವಾಗಿದೆಯೆಂದು ಮುಖ್ಯ ನ್ಯಾಯಾಧೀಶ ಜೆ.ಎಸ್.ಖೆಹರ್ ಹೇಳಿದ್ದಾರೆ.
ನವದೆಹಲಿ (ಜ.23): ಹೊಸ ಸಿಮ್ ಕಾರ್ಡ್ ನೀಡುವಾಗ ಗ್ರಾಹಕರ ವಿವರಗಳನ್ನು ಸಮರ್ಪಕವಾಗಿ ಪರಿಶೀಲನೆ ಮಾಡುವ ವ್ಯವಸ್ಥೆಯನ್ನು ಎರಡು ವಾರಗಳೊಳಗೆ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ನಕಲಿ ದಾಖಲೆಗಳನ್ನು ನೀಡಿ ಸಿಮ್ ಕಾರ್ಡ್ ಪಡೆಯುವ ಹಾಗೂ ಅವುಗಳನ್ನು ಅಪರಾಧ ಚಟುವಟಿಕೆಗಳಿಗೆ ದುರ್ಬಳಕೆ ಮಾಡುವ ಪ್ರವೃತಿಗೆ ಕಡಿವಾಣ ಹಾಕಲು ಸಮರ್ಪಕವಾದ ಪರಿಶೀಲನೆ ಮುಖ್ಯವಾಗಿದೆಯೆಂದು ಮುಖ್ಯ ನ್ಯಾಯಾಧೀಶ ಜೆ.ಎಸ್.ಖೆಹರ್ ಹೇಳಿದ್ದಾರೆ.
ಸಿಮ್ ಕಾರ್ಡ್’ಗಳನ್ನು ನೀಡುವಾಗ ಗ್ರಾಹಕರ ವಿವರಗಳನ್ನು ಸರಿಯಾಗಿ ಪರಿಶೀಲನೆ ಮಾಡುವ ವ್ಯವಸ್ಥೆಯಿಲ್ಲದಿರುದು ದೇಶದ ಭದ್ರತೆಗೆ ಅಪಾಯವುಂಟು ಮಾಡಬಹುದೆಂದು ವಾದಿಸಿ ಲೋಕನೀತಿ ಪ್ರತಿಷ್ಠಾನ ಎಂಬ ಸಂಸ್ಥೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
